ದೇಶ

ಪಂಜಾಬ್ ಸಿಎಂ ಛನ್ನಿ ಸಂಪುಟಕ್ಕೆ 15 ಸಚಿವರು, ಇಬ್ಬರು ಡಿಸಿಎಂ

Srinivas Rao BV

ಚಂಡೀಗಢ: ಪಂಜಾಬ್ ನ ನೂತನ ಸಿಎಂ ಚರಣ್ ಜಿತ್ ಸಿಂಗ್ ಛನ್ನಿ ತಮ್ಮ ಮೊದಲ ಸಚಿವ ಸಂಪುಟ ವಿಸ್ತರಣೆಯನ್ನು ಸೆ.26 ರಂದು ಮಾಡಿದ್ದಾರೆ. 15 ಮಂದಿ ಕ್ಯಾಬಿನೆಟ್ ಸಚಿವರು ಚರಣ್ ಜೀತ್ ಸಿಂಗ್ ಸಚಿವ ಸಂಪುಟ ಸೇರಿದ್ದು, ಈ ಪೈಕಿ 7 ಮಂದಿ ಹೊಸಬರಾಗಿದ್ದಾರೆ.

ರಣ್ದೀಪ್ ಸಿಂಗ್ ನಭಾ, ರಾಜ್ ಕುಮಾರ್ ವೆರ್ಕಾ, ಸಂಗತ್ ಸಿಂಗ್ ಗಿಲ್ಜೈನ್, ಪರ್ಗಾತ್ ಸಿಂಗ್, ಅಮರಿಂದರ್ ಸಿಂಗ್ ರಾಜ ವಾರ್ರಿಂಘ್, ಗುರ್ಕಿರತ್ ಸಿಂಗ್ ಕೊಟ್ಲಿ ಚರಣ್ ಜಿತ್ ಸಿಂಗ್ ಸಂಪುಟದ ಹೊಸ ಮುಖಗಳಾಗಿವೆ. 2018 ರಲ್ಲಿ ಅಮರಿಂದರ್ ಸಿಂಗ್ ಸಚಿವ ಸಂಪುಟದಿಂದ ಹೊರಬಂದಿದ್ದ ರಾಣ ಗುರುಜಿತ್ ಸಿಂಗ್ ಈಗ ಪುನಃ ಸಚಿವ ಸಂಪುಟಕ್ಕೆ ಮರಳಿದ್ದಾರೆ. 

ಅಮರಿಂದರ್ ಸಿಂಗ್ ಸಚಿವ ಸಂಪುಟದಲ್ಲಿದ್ದ ಬ್ರಹ್ಮ್ ಮೊಹಿಂದ್ರ, ಮನ್ಪ್ರೀತ್ ಸಿಂಗ್ ಬಾದಲ್, ತ್ರಿಪ್ತ್ ರಾಜೇಂದ್ರ ಸಿಂಗ್ ಬಜ್ವಾ, ಅರುಣಾ ಚೌಧರಿ, ಸುಖ್ಬೀಂದರ್ ಸಿಂಗ್ ಸರ್ಕಾರಿಯಾ, ರಜಿಯಾ ಸುಲ್ತಾನ, ವಿಜಯ್ ಇಂದರ್ ಸಿಂಗ್ಲಾ, ಭರತ್ ಭೂಷಣ್ ಆಶು ಅವರು ಸಚಿವ ಸಂಪುಟದಲ್ಲಿ ಮುಂದುವರೆದಿದ್ದಾರೆ. ಛನ್ನಿ ಅವರಿಗೆ ಇಬ್ಬರು ಉಪಮುಖ್ಯಮಂತ್ರಿಗಳಿದ್ದು, ಸುಖ್ಜಿಂದರ್ ಸಿಂಗ್ ರಂಧವಾ, ಒಪಿ ಸೋನಿ ಅವರು ಡಿಸಿಎಂ ಆಗಿರಲಿದ್ದಾರೆ.

SCROLL FOR NEXT