ದೇಶ

ಮಹಾರಾಷ್ಟ್ರ: ಥಾಣೆಯಲ್ಲಿ 8,000 ಕೆಜಿ ಗೋ ಮಾಂಸ ವಶ, ಇಬ್ಬರ ಬಂಧನ

Nagaraja AB

ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಿಷೇಧಿತ ಗೋ ಮಾಂಸವನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಂದ 8,000 ಕೆಜಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

ನಾಸಿಕ್- ಮುಂಬೈ ಹೆದ್ದಾರಿಯ ಖರೆಗಾಂವ್ ಟೋಲ್ ಬಳಿ ಸುಳ್ಳಿವನ್ನಾಧರಿಸಿ ಟೆಪೋವೊಂದನ್ನು ಪೊಲೀಸರು ಪರಿಶೀಲಿಸಿದಾಗ ಗೋ ಮಾಂಸ ಪತ್ತೆಯಾಗಿದೆ. ಇದನ್ನು ನಾಸಿಕ್ ಜಿಲ್ಲೆಯ ಮಾಲೇಗಾಂವ್ ನಿಂದ ಮುಂಬೈಗೆ ಹೊಂದಿಕೊಂಡಂತಿರುವ ಕುರ್ಲಾಗೆ ಸಾಗಿಸಲಾಗುತಿತ್ತು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಕಲ್ವಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಈ ಮಾಂಸದ ಮೌಲ್ಯ ಸುಮಾರು 8 ಲಕ್ಷ ರೂ. ಆಗಿದ್ದು, ಟೆಂಪೋವನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ರೈಸ್ ಅಹ್ಮದ್ ಸಲಾಂ ಖುರೇಶಿ ಮತ್ತು ಅಬ್ದುಲ್ ಅಹ್ಮದ್ ನಸೀಮ್ ಖಾನ್ ಎಂದು ಗುರುತಿಸಲಾಗಿದ್ದು, ಸಂಬಂಧಿತ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಲ್ಲಿ ನಗರದಲ್ಲಿ 14 ಟನ್ ಗೋ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT