ಬೆಂಕಿ ಅವಘಡ 
ದೇಶ

ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ: 8 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ!

ಮಧ್ಯಪ್ರದೇಶದ ಜಬಲ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಜಬಲ್ ಪುರದ ದಾಮೋಹ್ ನಾಕಾ ಪ್ರದೇಶದ ಸಮೀಪವಿರುವ ನ್ಯೂ ಲೈಫ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತು.

ಭೋಪಾಲ್: ಮಧ್ಯಪ್ರದೇಶದ ಜಬಲ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಜಬಲ್ ಪುರದ ದಾಮೋಹ್ ನಾಕಾ ಪ್ರದೇಶದ ಸಮೀಪವಿರುವ ನ್ಯೂ ಲೈಫ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತು.

ಬೆಂಕಿಯಲ್ಲಿ ಐವರು ರೋಗಿಗಳು ಮತ್ತು ಮೂವರು ಆಸ್ಪತ್ರೆ ಸಿಬ್ಬಂದಿ ಸಜೀವವಾಗಿ ಸುಟ್ಟುಹೋಗಿದ್ದಾರೆ. ಡಜನ್ ಗೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಭಾರೀ ಬೆಂಕಿ ಅವಘಡ. ನಮ್ಮ ತಂಡಗಳು ಆಸ್ಪತ್ರೆಯಲ್ಲಿ ಸಿಲುಕಿರುವ ಎಲ್ಲ ಜನರನ್ನು ರಕ್ಷಿಸಿವೆ. ಬೆಂಕಿ ನಂದಿಸಲಾಗಿದೆ ಎಂದು ಜಬಲ್ ಪುರದ ಮುಖ್ಯ ಪೊಲೀಸ್ ಅಧೀಕ್ಷಕ ಅಖಿಲೇಶ್ ಗೌರ್ ಹೇಳಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ  5 ಲಕ್ಷ ರೂ. ಪರಿಹಾರ ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಳೆ ಬಳಿಕ ಸಿಲಿಕಾನ್ ಸಿಟಿ ಕೂಲ್-ಕೂಲ್: 10 ಡಿಗ್ರಿ ಸೆಲ್ಸಿಯಸ್ ತಾಪಮಾನ ಕುಸಿತ; ಮುಂದಿನ 2 ದಿನಗಳೂ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ..!

ಬೌರಿಂಗ್ ಆಸ್ಪತ್ರೆ ದುರಂತ: ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಣೆ

IPL 2026: ರಿಕಲ್ಟನ್ ಶತಕ ವ್ಯರ್ಥ; ಮುಂಬೈ ನೀಡಿದ ಟಾರ್ಗೆಟ್ ಧೂಳಿಪಟ, ದಾಖಲೆಯ 249 ರನ್ ಬಾರಿಸಿದ ಗೆದ್ದ SRH!

ಬಾಂಗ್ಲಾದೇಶ ಸರ್ಕಾರ ದೊಡ್ಡ ತಪ್ಪು ಮಾಡಿದೆ... ಟಿ20 ವಿಶ್ವಕಪ್ ಬಗ್ಗೆ ಶಕೀಬ್ ಅಲ್ ಹಸನ್ 'ಸ್ಫೋಟಕ ಹೇಳಿಕೆ'!

IPL 2026: 'ಬ್ಯಾಟಲ್ಲಿ AI Chip ಇದೆ' ಎಂದ ಪಾಕಿಸ್ತಾನದ Nouman Niaz ಗೆ ಬಟ್ಟೆ ಸುತ್ತಿ ಹೊಡೆದ ವೈಭವ್ ಸೂರ್ಯವಂಶಿ

SCROLL FOR NEXT