82 ವರ್ಷದ ದಯಾಬಾಯಿ 
ದೇಶ

ದೆಹಲಿ: ಆರೋಗ್ಯ ಸೇವೆಗೆ ಒತ್ತಾಯಿಸಿ 82 ವರ್ಷದ ವೃದ್ಧೆಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರಿಗೆ ವಿಶೇಷ ಆರೋಗ್ಯ ಸೇವೆ ನೀಡುವಂತೆ ಒತ್ತಾಯಿಸಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ 82 ವರ್ಷದ ದಯಾಬಾಯಿ ಅವರು ಕೇರಳದ ಸೆಕ್ರೆಟರಿಯೇಟ್ ಎದುರು ನಾಳೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.

ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರಿಗೆ ವಿಶೇಷ ಆರೋಗ್ಯ ಸೇವೆ ನೀಡುವಂತೆ ಒತ್ತಾಯಿಸಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ 82 ವರ್ಷದ ದಯಾಬಾಯಿ ಅವರು ಕೇರಳದ ಸೆಕ್ರೆಟರಿಯೇಟ್ ಎದುರು ನಾಳೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ನಮ್ಮ ಬೇಡಿಕೆಗಳು ವಿಶೇಷವೇನೂ ಅಲ್ಲ. ಆರೋಗ್ಯ ರಕ್ಷಣೆ ಜೀವನದ ಹಕ್ಕು. ಇದು ಮೂಲಭೂತ ಹಕ್ಕು ಎಂದು ಅವರು ಹೇಳಿದ್ದಾರೆ.

ಏಮ್ಸ್ ಸ್ಥಾಪನೆಗಾಗಿ  ಉದ್ದೇಶಿತ ಸ್ಥಳಗಳ ಪಟ್ಟಿಯಲ್ಲಿ ಕಾಸರಗೋಡು ಸೇರಿಸಬೇಕು, ಎಂಡೋಸಲ್ಫಾನ್ ರೋಗಿಗಳಿಗೆ ವಿಶೇಷ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡುವುದು ಮತ್ತು ಮೂರು, ಎಂಡೋಸಲ್ಫಾನ್ ರೋಗಿಗಳಿಗೆ ಡೇ ಕೇರ್ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬುದು ದಯಾಬಾಯಿ ಅವರ ಪ್ರಮುಖ ಮೂರು ಬೇಡಿಕೆಗಳಾಗಿವೆ.

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕರ್ನಾಟಕ ಸರ್ಕಾರ ಅವಕಾಶ ನೀಡದ ಕಾರಣ ಜಿಲ್ಲೆಯ ಗಡಿಯಲ್ಲಿ 20 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗೀ ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪಿಸಬೇಕು ಎಂದು ಅವರು ಹೇಳಿದ್ದಾರೆ. ತನಗೆ 82 ವರ್ಷ ಆದರೆ 28 ವರ್ಷ ಎಂದು ಭಾವಿಸಿ ಸುದೀರ್ಘ ಉಪವಾಸ ಸತ್ಯಾಗ್ರಹಕ್ಕೆ ಸಿದ್ಧ ಎನ್ನುತ್ತಾರೆ ದಯಾಬಾಯಿ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಮಂಕಿಮ್ಯಾನ್'; ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

‘Dimagi Naxal’ ವಿವಾದ: ‘ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ’: ಕಿರಣ್‌ ರಿಜಿಜು ವಾಗ್ದಾಳಿ

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!