ದೇಶ

ಕೆಲವು ಕೇಂದ್ರಗಳಲ್ಲಿ ಸಿಯುಇಟಿ ರದ್ದು: ಯುಜಿಸಿ ಮುಖ್ಯಸ್ಥರು ಹೇಳಿದ್ದು ಹೀಗೆ 

Nagaraja AB

ನವದೆಹಲಿ: ಕೆಲವು ಕೇಂದ್ರಗಳಲ್ಲಿ ಸಾಮಾನ್ಯ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ (ಸಿಯುಇಟಿ) ರದ್ದುಗೊಳಿಸಿದ ಬಗ್ಗೆ ಟೀಕೆಗಳನ್ನು ಎದುರಿಸುತ್ತಿರುವ ಯುಜಿಸಿ ಅಧ್ಯಕ್ಷ ಎಂ ಜಗದೀಶ್ ಕುಮಾರ್, ವಿಧ್ವಂಸಕದ ಸೂಚನೆಗಳಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದು ಭಾನುವಾರ ಹೇಳಿದ್ದಾರೆ.

ಕಳೆದ ವಾರ ರದ್ದುಗೊಂಡಿದ್ದ ಪರೀಕ್ಷೆಯನ್ನು ಈಗ ಆಗಸ್ಟ್ 24 ರಿಂದ 28 ರವರೆಗೆ ನಡೆಸಲಾಗುವುದು ಮತ್ತು ಹೊಸದಾಗಿ ಪ್ರವೇಶ ಪತ್ರಗಳನ್ನು ನೀಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದೆ. ಯಾವುದೇ  ಉದ್ದೇಶಪೂರ್ವಕ ವಿಧ್ವಂಸಕ ದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರ್ ಹೇಳಿದರು.

ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ದೇಶಾದ್ಯಂತ 250ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ವಿದೇಶದ ಒಂಬತ್ತು ನಗರಗಳಲ್ಲಿ ಸಿಯುಇಟಿ ನಡೆಸಲಾಗುತ್ತಿದೆ. ವಿಧ್ವಂಸಕ ಕೃತ್ಯದ ವರದಿಗಳು ಮತ್ತು ಸೂಚನೆಗಳಿಂದ ತಕ್ಷಣ ಕಾರ್ಯಪ್ರತ್ತವಾದ  ಎನ್‌ಟಿಎ , ಅಂತಹ ಘಟನೆಗಳು ಸಂಭವಿಸಬಹುದಾದ  ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ ಮತ್ತು ಮುಂದೂಡಿದೆ ಎಂದರು. 

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲವು ಕೇಂದ್ರಗಳಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಬದಲಾವಣೆಗಳ ಬಗ್ಗೆ ನಿರಂತರವಾಗಿ ಇಮೇಲ್, ಸಂದೇಶ ಮತ್ತು ಧ್ವನಿ ಮೇಲ್ ಮೂಲಕ ವಿದ್ಯಾರ್ಥಿಗಳೊಂದಿಗೆ ಎನ್ ಟಿಎ ಸಂಪರ್ಕದಲ್ಲಿದೆ ಮತ್ತು ಇದರಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಸುಗಮವಾಗಿ ಸಿಯುಇಟಿ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

SCROLL FOR NEXT