ದೇಶ

ಗುಜರಾತ್ ಕಾಂಗ್ರೆಸ್ ಶೀಘ್ರದಲ್ಲೇ ಗುಜರಾತ್ ಬಿಜೆಪಿಯೊಂದಿಗೆ ವಿಲೀನ: ಅರವಿಂದ್ ಕೇಜ್ರಿವಾಲ್

Nagaraja AB

ವಡೋದರ: ಗುಜರಾತ್ ಕಾಂಗ್ರೆಸ್ ಶೀಘ್ರದಲ್ಲೇ ಗುಜರಾತ್ ಬಿಜೆಪಿ ಘಟಕದೊಂದಿಗೆ ವಿಲೀನವಾಗಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಪ್ರೀತಿ ಉಕ್ಕಿ ಹರಿಯುತ್ತಿರುವುದರಿಂದ ಶೀಘ್ರದಲ್ಲಿಯೇ ವಿಲೀನವಾಗಲಿವೆ ಎಂದರು.ಗುಜರಾತ್ ಚುನಾವಣೆಯಲ್ಲಿ ಎಎಪಿ ಮತ್ತು ಬಿಜೆಪಿ ನಡುವಣ ಹೋರಾಟವಿರಲಿದೆ. ಗುಜರಾತ್ ಕಾಂಗ್ರೆಸ್, ಗುಜರಾತ್ ಬಿಜೆಪಿಯೊಂದಿಗೆ ವಿಲೀನವಾಗಲು ಹೋಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಪ್ರೀತಿಗೆ ಕೊನೆಯಾಗಲಿದೆ ಎಂದರು. 

ಒಂದು ಕಡೆ ಬಿಜೆಪಿ 27 ವರ್ಷಗಳ ಕಾಲ ದುರಾಡಳಿತ ನಡೆಸಿದ್ದರೆ ಮತ್ತೊಂದು ಕಡೆ ಅಲ್ಲಿ ಎಎಪಿಯ ಹೊಸ ರಾಜಕೀಯವಿದೆ  ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ರಾಜ್ಯದಲ್ಲಿ ಆರೋಗ್ಯ ಸೇವೆ ಸುಧಾರಣೆ, ಉಚಿತ  ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಭರವಸೆಗಳನ್ನು ಕೇಜ್ರಿವಾಲ್ ನೀಡಿದರು.

ದೆಹಲಿಯಲ್ಲಿ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದ್ದು, ಪಂಜಾಬಿನಲ್ಲಿ ಇತ್ತೀಚಿಗೆ 25 ಲಕ್ಷ ಕುಟುಂಬಗಳು ವಿದ್ಯುತ್ ಶುಲ್ಕ ಕಟ್ಟದಂತಾಗಿದೆ. ಆದೇ ರೀತಿಯಲ್ಲಿ ಗುಜರಾತ್ ನಲ್ಲಿಯೂ ಎಲ್ಲಾ ವೇಳೆಯಲ್ಲೂ ವಿದ್ಯುತ್ ಪೂರೈಸಲಾಗುವುದು ಎಂದು ಅವರು ಹೇಳಿದರು. 

SCROLL FOR NEXT