ನವದೆಹಲಿ: ಭಯೋತ್ಪಾದಕ ಸಂಘಟನೆಗೆ ನಿಧಿ ಸಂಗ್ರಹಿಸುವಲ್ಲಿ ಭಾಗಿಯಾಗಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್)ನ ತೀವ್ರಗಾಮಿ ಮತ್ತು ಸಕ್ರಿಯ ಸದಸ್ಯನನ್ನು ದೆಹಲಿಯ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಆರೋಪಿಯನ್ನು ದೆಹಲಿಯ ಬಟ್ಲಾ ಹೌಸ್ ನಿವಾಸಿ ಮೊಹ್ಸಿನ್ ಅಹ್ಮದ್ ಎಂದು ಗುರುತಿಸಲಾಗಿದೆ.
'ಸದ್ಯ ಬಟ್ಲಾ ಹೌಸ್‌ನಲ್ಲಿರುವ ಜೋಗಾಬಾಯಿ ಎಕ್ಸ್‌ಟೆನ್ಶನ್ ಬಳಿ ವಾಸಿಸುತ್ತಿದ್ದ ಆರೋಪಿ ಮೊಹ್ಸಿನ್ ಅಹ್ಮದ್‌ನ ನಿವಾಸದಲ್ಲಿ ಎನ್‌ಐಎ ನಿನ್ನೆ (ಶನಿವಾರ) ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈತ ಬಿಹಾರದ ಪಾಟ್ನಾದ ಖಾಯಂ ನಿವಾಸಿ. ನಂತರ ಆತನನ್ನು ಆನ್‌ಲೈನ್ ಮತ್ತು ಐಸಿಸ್‌ನ ಇತರೆ ಚಟುವಟಿಕೆಗಳಲ್ಲಿ ಬಂಧಿಸಲಾಗಿದೆ' ಎಂದು ತನಿಖಾ ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಜೂನ್ 25, 2022 ರಂದು ಎನ್ಐಎ ಸ್ವಯಂಪ್ರೇರಿತವಾಗಿ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು ಎಂದು ಅಧಿಕೃತ ಮಾಹಿತಿ ತಿಳಿಸಿದೆ.
ಆರೋಪಿ ಮೊಹ್ಸಿನ್ ಅಹ್ಮದ್ ಐಸಿಸ್‌ನ ತೀವ್ರಗಾಮಿ ಮತ್ತು ಸಕ್ರಿಯ ಸದಸ್ಯನಾಗಿದ್ದ. ಭಾರತ ಮತ್ತು ವಿದೇಶಗಳಲ್ಲಿ ಐಸಿಸ್ ಬಗ್ಗೆ ಸಹಾನುಭೂತಿ ಹೊಂದಿರುವವರಿಂದ ನಿಧಿ ಸಂಗ್ರಹದಲ್ಲಿ ಭಾಗಿಯಾಗಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಐಸಿಸ್‌ನ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಅವರು ಈ ಹಣವನ್ನು ಸಿರಿಯಾ ಮತ್ತು ಇತರ ಸ್ಥಳಗಳಿಗೆ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಕಳುಹಿಸುತ್ತಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಭಯೋತ್ಪಾದನಾ ವಿರೋಧಿ ಸಂಸ್ಥೆ ತಿಳಿಸಿದೆ.