ತಮಿಳುನಾಡು ರಾಜ್ಯಪಾಲರೊಂದಿಗೆ ರಜನಿಕಾಂತ್ ಸಭೆ 
ದೇಶ

ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾದ ರಜನಿ, ರಾಜಕಾರಣಕ್ಕೆ ಮರಳುತ್ತಾರಾ ಸೂಪರ್ ಸ್ಟಾರ್?

ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ  ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿಯಾಗಿರುವುದು ಅವರ ಅಭಿಯಾನಿಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆದರೆ. ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ.

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ  ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿಯಾಗಿರುವುದು ಅವರ ಅಭಿಯಾನಿಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆದರೆ. ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ.

ರಾಷ್ಟ್ರ ರಾಜಧಾನಿಯಿಂದ ಮರಳಿದ ನಂತರ ರಾಜಭವನದಲ್ಲಿ ರಾಜ್ಯಪಾಲ ರವಿ ಅವರನ್ನು ಭೇಟಿಯಾದ ರಜನಿಕಾಂತ್, ಇದೊಂದು ಸೌಜನ್ಯದ ಭೇಟಿಯಾಗಿತ್ತು. ತಮಿಳುನಾಡಿಗಾಗಿ ರಾಜ್ಯಪಾಲರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.  ಪೋಯಸ್ ಗಾರ್ಡನ್ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದು ಸೌಜನ್ಯದ ಭೇಟಿ. ನಾನು ಸುಮಾರು 25-30 ನಿಮಿಷಗಳ ಕಾಲ ರಾಜ್ಯಪಾಲರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು. 

ರಾಜ್ಯಪಾಲರು ತಮ್ಮ ಹೆಚ್ಚಿನ ಸಮಯವನ್ನು ಉತ್ತರ ಭಾರತದಲ್ಲಿ ಕಳೆದಿದ್ದಾರೆ ಆದರೆ,  ತಮಿಳುನಾಡು ಮತ್ತು ಇಲ್ಲಿನ ಜನರನ್ನು ಪ್ರೀತಿಸುತ್ತಾರೆ . ತಮಿಳರ ಶ್ರಮ ಮತ್ತು ಪ್ರಾಮಾಣಿಕತೆಯನ್ನು ಇಷ್ಟಪಡುತ್ತಾರೆ. ಮುಖ್ಯವಾಗಿ, ಅವರು ಇಲ್ಲಿನ ಆಧ್ಯಾತ್ಮಿಕ ಪ್ರಜ್ಞೆಯಿಂದ ಪ್ರಭಾವಿತರಾಗಿದ್ದಾರೆ. ತಮಿಳುನಾಡಿನ ಕಲ್ಯಾಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ ಎಂದರು. 

ಭವಿಷ್ಯದಲ್ಲಿ ರಾಜಕೀಯಕ್ಕೆ ಧುಮುಕುತ್ತೀರಾ ಎಂಬ ಪ್ರಶ್ನೆಗೆ ನಕಾರಾತ್ಮಕವಾಗಿ ಉತ್ತರಿಸಿದರು ಮತ್ತು ಹಾಲು ಮತ್ತು ಮೊಸರಿನಂತಹ ಅಗತ್ಯ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅವರ ಮುಂಬರುವ ಚಿತ್ರ ಜೈಲರ್ ಚಿತ್ರೀಕರಣವು ಆಗಸ್ಟ್ 15 ಅಥವಾ 22 ರಂದು ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!

ಅಂತಿಮ ಹಂತದಲ್ಲಿ 21 ಚಿನ್ನದ ಪದಕಗಳು: 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟು 85 ಪದಕ!

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!