ಸುಶೀಲ್ ಮೋದಿ 
ದೇಶ

ಬಿಹಾರ: ಸುಶೀಲ್ ಮೋದಿಯನ್ನು ರಾಜ್ಯ ರಾಜಕಾರಣದಿಂದ ದೂರವಿಟ್ಟಿರುವುದು ಬಿಜೆಪಿ ಹಿನ್ನಡೆಗೆ ಕಾರಣವೇ?

2020ರ ವಿಧಾನಸಭಾ ಚುನಾವಣೆಯ ನಂತರ ಬಿಹಾರದ ರಚನೆಯಾದ ಜೆಡಿಯು- ಬಿಜೆಪಿ ಸರ್ಕಾರ ಆರಂಭದಿಂದಲೂ ಅಲುಗಾಡುತ್ತಲೇ ಆರಂಭವಾಗಿತ್ತು. ಆದರೆ, ಸುಶೀಲ್ ಕುಮಾರ್ ಅವರಂತಹ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ನವದೆಹಲಿ: 2020ರ ವಿಧಾನಸಭಾ ಚುನಾವಣೆಯ ನಂತರ ಬಿಹಾರದ ರಚನೆಯಾದ ಜೆಡಿಯು- ಬಿಜೆಪಿ ಸರ್ಕಾರ ಆರಂಭದಿಂದಲೂ ಅಲುಗಾಡುತ್ತಲೇ ಆರಂಭವಾಗಿತ್ತು. ಆದರೆ, ಸುಶೀಲ್ ಕುಮಾರ್ ಮೋದಿ ಅವರಂತಹ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಮ್ಮಿಶ್ರ ಸರ್ಕಾರವನ್ನು ಅತ್ಯುತ್ತಮವಾಗಿ ಅರ್ಥ ಮಾಡಿಕೊಂಡಿದ್ದರು ಎಂದು ಉಭಯ ಪಕ್ಷಗಳ ಹಿರಿಯ ಮುಖಂಡರು ಬುಧವಾರ ಹೇಳಿದ್ದಾರೆ.

2005ರಿಂದಲೂ ಎನ್ ಡಿಎ ಮೈತ್ರಿಯನ್ನು ಸುಗಮವಾಗಿ ಸಾಗಿಸುತ್ತಿದ್ದ ನಿತೀಶ್ ಕುಮಾರ್ ಮತ್ತು ಸುಶೀಲ್ ಕುಮಾರ್ ಮೋದಿ ಅವರನ್ನು ಬಿಹಾರ ರಾಜಕಾರಣದಲ್ಲಿ ಸಚಿನ್ ತೆಂಡೊಲ್ಕರ್ ಹಾಗೂ ಸೌರವ್ ಗಂಗೂಲಿಗೆ ಹೋಲಿಸಲಾಗುತಿತ್ತು. ಆದರೆ, 2020 ರಲ್ಲಿ ಸಮ್ಮಿಶ್ರ ಸರ್ಕಾರ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ ಸುಶೀಲ್ ಮೋದಿ ಮತ್ತು ಮತ್ತಿತರ  ಕೆಲವು ಹಿರಿಯ ನಾಯಕರನ್ನು  ಬಿಹಾರ ರಾಜಕೀಯದಿಂದ ದೂರವಿಟ್ಟಿತು. ಕಳೆದ ಎನ್‌ಡಿಎ ಸರ್ಕಾರದಲ್ಲಿ ಸುಶೀಲ್ ಮೋದಿ ಬದಲಿಗೆ ತಾರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಉಪಮುಖ್ಯಮಂತ್ರಿಗಳಾಗಿ ನಾಮನಿರ್ದೇಶನಗೊಂಡಿದ್ದರು.

ಬುಧವಾರ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಉಭಯ ಪಕ್ಷಗಳ ಹಿರಿಯ ಮುಖಂಡರು ಹೆಚ್ಚು ರಾಜಕೀಯ ಸ್ಥಾನಮಾನವನ್ನು ಹೊಂದಿಲ್ಲದ ಹೊಸ ನಾಯಕರ ಗುಂಪು ಮತ್ತು ಭಿನ್ನಾಭಿಪ್ರಾಯಗಳನ್ನು ಸಮನ್ವಯಗೊಳಿಸಲು ವಿಫಲವಾದ ಸಂವಹನದ ಕೊರತೆಯನ್ನು ಎತ್ತಿ ತೋರಿಸಿದರು.

ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸುಶೀಲ್ ಮೋದಿ, ನಂದ್ ಕಿಶೋರ್ ಯಾದವ್, ಪ್ರೇಮ್ ಕುಮಾರ್ ಮತ್ತು ಇತರ ಬಿಜೆಪಿ ಮುಖಂಡರ ನಾಯಕತ್ವವನ್ನು ಬಿಜೆಪಿ ಸಂಪೂರ್ಣವಾಗಿ ಬದಲಿಸಿತ್ತು. ಇವರೆಲ್ಲರೂ ಮೈತ್ರಿಯನ್ನು ಅರ್ಥ ಮಾಡಿಕೊಂಡಿದ್ದರು ಎಂದು ಮುಖಂಡರೊಬ್ಬರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT