ದೇಶ

ಛತ್ತೀಸ್‌ಗಢ: ತ್ರಿವರ್ಣ ಧ್ವಜ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಪೌರ ಕಾರ್ಮಿಕ ಸಾವು

Lingaraj Badiger

ಕೊರ್ಬಾ: ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಶನಿವಾರ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಅಂಗವಾಗಿ ತ್ರಿವರ್ಣ ಧ್ವಜ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ 36 ವರ್ಷದ ಸ್ಥಳೀಯ ನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ಕಾರ್ಮಿಕನನ್ನು ಸುಮನ್ ತಿಗ್ಗಾ ಎಂದು ಗುರುತಿಸಲಾಗಿದ್ದು, ಇಂದು ಬೆಳಗ್ಗೆ ಪ್ರತೀಕ್ಷಾ ಬಸ್ ನಿಲ್ದಾಣದಲ್ಲಿ ಮತ್ತೊಬ್ಬ ಕಾರ್ಮಿಕನೊಂದಿಗೆ ರಾಷ್ಟ್ರಧ್ವಜವನ್ನು ಕಟ್ಟುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಮಣೇಂದ್ರಗಢ ಉಪವಿಭಾಗೀಯ ಪೊಲೀಸ್ ಅಧಿಕಾರಿ(ಎಸ್‌ಡಿಒಪಿ) ರಾಕೇಶ್ ಕುರ್ರೆ ಅವರು ಹೇಳಿದ್ದಾರೆ.

"ಘಟನೆಯಲ್ಲಿ ಸುಮನ್ ತಿಗ್ಗಾ ಸಹೋದ್ಯೋಗಿ ರಾಮಕೃಪಾಲ್ ಸಿಂಗ್ (35) ಸಹ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಮಿಕರ ಸಂಘ ತಿಗ್ಗಾ ಸಾವಿನ ನಂತರ ಪ್ರತಿಭಟನೆ ನಡೆಸಿದ್ದು, ಮೃತನ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ" ಎಂದು ಕುರ್ರೆ ಅವರು ತಿಳಿಸಿದ್ದಾರೆ.

SCROLL FOR NEXT