ದೇಶ

ಸ್ವಾತಂತ್ರ್ಯ ದಿನಾಚರಣೆ: ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಗನ್ ಗಳು, ಎಂಐ- 17 ಹೆಲಿಕಾಪ್ಟರ್ ಬಳಕೆ!

Nagaraja AB

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮ ಈ ಬಾರಿ ವಿಶೇಷವಾಗಿತ್ತು. ತ್ರಿವರ್ಣ ಧ್ವಜಕ್ಕೆ 21 ಬಾರಿ ಕುಶಾಲ ತೋಪು ಸಿಡಿಸಿ ವಂದನೆ ಸಲ್ಲಿಸಲು 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ವದೇಶಿ ಗನ್ ಗಳನ್ನು ಬಳಸಲಾಯಿತು.

ಈವರೆಗೂ ಈ ಕಾರ್ಯಕ್ರಮಕ್ಕೆ ಬ್ರಿಟಿಷ್ ಗನ್ ಗಳನ್ನು ಬಳಸಲಾಗುತಿತ್ತು. ಇದೇ ಮೊದಲ ಬಾರಿಗೆ ಎಂಐ- 17 ಹೆಲಿಕಾಪ್ಟರ್ ಮೂಲಕ ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ಮಾಡಲಾಯಿತು. 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಕ್ಕೆ ಸ್ವದೇಶಿ ನಿರ್ಮಿತ ಗನ್ ಗಳಿಂದ ಗೌರವ ವಂದನೆ ಸಲ್ಲಿಸಲಾಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಸ್ವದೇಶಿ ನಿರ್ಮಿತ ಗನ್ ಗಳ ಘರ್ಜನೆಯಿಂದ ಎಲ್ಲಾ ಭಾರತೀಯರು ಸ್ಫೋರ್ತಿ ಪಡೆಯಲಿದ್ದು, ಸಬಲೀಕರಣದ ಭಾವನೆ ಉಂಟಾಗಲಿದೆ ಎಂದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ವದೇಶಿ ನಿರ್ಮಿತ  ಹೊವಿಟ್ಜರ್ ಗನ್ ಗಳನ್ನು ಸೋಮವಾರ ಗೌರವ ವಂದನೆ ಸಮಾರಂಭಕ್ಕೆ ಬಳಸಿಲಾಗಿದ್ದು, ಆತ್ಮ ನಿರ್ಭರ ಭಾರತ ಕಲ್ಪನೆಯನ್ನು ಸಾಕಾರಗೊಳಿಸುವತ್ತಾ ಮುನ್ನಡೆದಿರುವ ಭಾರತೀಯ ಯೋಧರು ಮತ್ತು ಸಶಸ್ತ್ರ ಪಡೆಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.  

300 ಸಲಕರಣೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಯೋಧರು ನಿರ್ಧರಿಸಿದಾಗ ಅದು ಸಣ್ಣ ನಿರ್ಣಯವಲ್ಲ, ಆತ್ಮ ನಿರ್ಭರ ಭಾರತದ ಬೀಜ ಮುಂದೆ ಹೆಮ್ಮರವಾಗಿ ಬೆಳೆಯಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. 

SCROLL FOR NEXT