ದೇಶ

'ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಡೈಲಾಗ್, ಪೇಟ ಧರಿಸಿದ್ದು ಬಿಟ್ಟರೆ ಮೋದಿ ಏನನ್ನೂ ಘೋಷಿಸಲಿಲ್ಲ': ಕೆಸಿಆರ್

Lingaraj Badiger

ವಿಕಾರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ "ಡೈಲಾಗ್" ಹೊಡೆಯುವುದು ಮತ್ತು ತಲೆಗೆ ಉದ್ದನೆಯ ಪೇಟ ಧರಿಸಿ ಪ್ರದರ್ಶಿಸುವುದನ್ನು ಹೊರತುಪಡಿಸಿ ಯಾವುದೇ ಪ್ರಯೋಜನಕಾರಿ ಯೋಜನೆ ಘೋಷಣೆ ಮಾಡಲಿಲ್ಲ ಎಂದು ಹೇಳಿದ್ದಾರೆ.

ಇಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೆಸಿಆರ್, ದೇಶದ ಯಾವುದೇ ರಾಜ್ಯ ಜಾರಿಗೆ ತರದ ಕಲ್ಯಾಣ ಕಾರ್ಯಕ್ರಮಗಳನ್ನು ತೆಲಂಗಾಣದಲ್ಲಿ ಜಾರಿಗೆ ತರಲಾಗಿದೆ ಎಂದು ಹೇಳುವ ಮೂಲಕ ಪ್ರಧಾನಿಯವರ ಉಚಿತ ಸಂಸ್ಕೃತಿ  ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ಕಲ್ಯಾಣ ಯೋಜನೆಗಳನ್ನು ಉಚಿತ ಕೊಡುಗೆ ಎಂದು ಕರೆಯುವುದು ಜನತೆಗೆ ಅಪಮಾನ ಮಾಡಿದಂತೆ ಎಂದು ತೆಲಂಗಾಣ ಸಿಎಂ ಮೋದಿ ವಿರುದ್ಧ ಹರಿಹಾಯ್ದರು.

"ನಿನ್ನೆ ನಾನೂ ಕೂಡ ಪ್ರಧಾನಿಯವರ ಭಾಷಣ ಕೇಳುತ್ತಿದ್ದೆ. ಹೇಗಿದ್ದರೂ ಅವರು ಎಂಟು ವರ್ಷಗಳ ಕಾಲ ಏನನ್ನೂ ಮಾಡಲಿಲ್ಲ, ಉಳಿದ ಎರಡು ವರ್ಷಗಳಲ್ಲಿ ಏನಾದರೂ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಇಡೀ ಒಂದು ಗಂಟೆಯ ಭಾಷಣದಲ್ಲಿ ಅವರ ಸುತ್ತ ಡೈಲಾಗ್ ಗಳು ಮತ್ತು ಸ್ಕಾರ್ಫ್ ಹೊರತುಪಡಿಸಿ ಏನೂ ಇರಲಿಲ್ಲ. ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ದೇಶದ ಕಲ್ಯಾಣದ ಬಗ್ಗೆ ಒಂದೇ ಒಂದು ಮಾತನ್ನೂ ಹೇಳಲಿಲ್ಲ ” ಎಂದು ತೆಲಂಗಾಣ ಸಿಎಂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಕಡಿಮೆ ಬೆಲೆಗೆ ಸರಕುಗಳು ಲಭ್ಯವಿದ್ದಾಗಲೂ ಕೇಂದ್ರ ಸರ್ಕಾರ ಪಂಪ್ ಸೆಟ್‌ಗಳಿಗೆ ಮೀಟರ್‌ಗಳನ್ನು ಅಳವಡಿಸುವಂತೆ ಮತ್ತು ಕಲ್ಲಿದ್ದಲು ಆಮದು ಮಾಡಿಕೊಳ್ಳುವಂತೆ ರಾಜ್ಯಗಳಿಗೆ ಒತ್ತಾಯಿಸುತ್ತಿದೆ ಎಂದು ಕೆಸಿಆರ್ ಆರೋಪಿಸಿದರು.

SCROLL FOR NEXT