ಸಿಬಿಐ 
ದೇಶ

ದೆಹಲಿ ಅಬಕಾರಿ ನೀತಿ ವಿವಾದ: ಸಿಸೋಡಿಯಾ ಆಪ್ತ ವಿಜಯ್ ನಾಯರ್ ವಿರುದ್ಧ ಕೇಂದ್ರದಿಂದ ಪರ್ಯಾಯ ತನಿಖೆ!

ದೆಹಲಿಯ ಅಬಕಾರಿ ಪರವಾನಗಿ ಹಗರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದಂತೆ, ಇತ್ತ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸಹ ಪರ್ಯಾಯ ತನಿಖೆಯನ್ನು ಪ್ರಾರಂಭಿಸಿದೆ.

ನವದೆಹಲಿ: ದೆಹಲಿಯ ಅಬಕಾರಿ ಪರವಾನಗಿ ಹಗರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದಂತೆ, ಇತ್ತ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸಹ ಪರ್ಯಾಯ ತನಿಖೆಯನ್ನು ಪ್ರಾರಂಭಿಸಿದೆ. ಇನ್ನು ತನಿಖೆ ವೇಳೆ ಮುನ್ನೆಲೆಗೆ ಬಂದ ಪ್ರಮುಖ ಹೆಸರು ವಿಜಯ್ ನಾಯರ್ ಆಗಿದ್ದು ಓನ್ಲಿ ಮಚ್ ಲೌಡರ್, ಬಾಬೆಲ್‌ಫಿಶ್ ಮತ್ತು ಮದರ್ ಸ್ವೇರ್ ಸೇರಿದಂತೆ ಕಂಪನಿಗಳು ಅವರೊಂದಿಗೆ ತಳುಕು ಹಾಕಿಕೊಂಡಿದೆ.

ಪ್ರಾಥಮಿಕ ತನಿಖೆ ವೇಳೆ ಬಂದಿರುವ ಇತರ ಹೆಸರುಗಳು ಪರೋಕ್ಷವಾಗಿ ನಾಯರ್‌ಗೆ ತಳುಕು ಹಾಕಿಕೊಳ್ಳುತ್ತಿದೆ. ಅವರ ಸಹ-ನಿರ್ದೇಶಕರ ಮೂಲಕ ಸೇರಿದಂತೆ, ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ಮತ್ತು ಹಾಸ್ಯ ಪ್ರದರ್ಶನಗಳಲ್ಲಿ ತೊಡಗಿರುವ ಘಟಕಗಳ ಪೈಕಿ ವೈರ್‌ಡಾಸ್ ಕಾಮಿಡಿ, ಮೋಟರ್‌ಮೌತ್ ರೈಟರ್ಸ್ ಕಂಪನಿಗಳ ರಿಜಿಸ್ಟ್ರಾರ್ ದಾಖಲೆಗಳನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಆಪ್ತ ವಿಜಯ್ ನಾಯರ್ ಸೇರಿದಂತೆ ಕನಿಷ್ಠ 14 ವ್ಯಕ್ತಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕಾರ್ಪೊರೇಟ್ ವ್ಯವಹಾರಗಳು(MCA) ಪ್ರಧಾನ ತನಿಖಾ ಸಂಸ್ಥೆ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಈ 15 ವ್ಯಕ್ತಿಗಳೊಂದಿಗೆ ಸಂಬಂಧಿಸಿದ ಕಾರ್ಪೊರೇಟ್ ಘಟಕಗಳ ಸಂಬಂಧವನ್ನು ಪರಿಶೀಲಿಸುತ್ತಿದೆ.

ಸಿಬಿಐ ದಾಳಿಯ ಒಂದು ದಿನದ ನಂತರ, ಸಿಸೋಡಿಯಾ ಮತ್ತು ಅವರ ಪಕ್ಷವಾದ ಆಮ್ ಆದ್ಮಿ ಪಕ್ಷವು ಸಿಬಿಐ ಕ್ರಮವನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿವೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಂದ್ರದಲ್ಲಿ ಪರ್ಯಾಯವಾಗಿ ಅರವಿಂದ್ ಕೇಜ್ರಿವಾಲ್ ಹೊರಹೊಮ್ಮುವ ಬಗ್ಗೆ ಬಿಜೆಪಿ ಸರ್ಕಾರವು ಹೆದರುತ್ತಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ನಾಯರ್ ಇಂದು ಶನಿವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ನಾನು ದೇಶ ಬಿಟ್ಟು ಪರಾರಿಯಾಗಿಲ್ಲ 'ವೈಯಕ್ತಿಕ' ಕೆಲಸಕ್ಕಾಗಿ ವಿದೇಶದಲ್ಲಿರುವುದಾಗಿ ಹೇಳಿದ್ದಾರೆ. ಅಲ್ಲದೆ ತಾವು ಸಿಬಿಐ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದ್ದಾರೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ತನಿಖೆ ನಡೆಸುತ್ತಿರುವ ಕಂಪನಿಗಳ ಪಟ್ಟಿಯು ವಿವಿಧ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಸ್ಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಹಲವಾರು ಕಂಪನಿಗಳನ್ನು ಒಳಗೊಂಡಿದೆ. ಹಲವಾರು ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳನ್ನು ಒಳಗೊಂಡಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ನಾಯರ್ ಸೇರಿದಂತೆ ಆರೋಪಿತ ಮದ್ಯದ ಪರವಾನಗಿದಾರರು ಮತ್ತು ಉದ್ಯಮಿಗಳು ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT