ದೇಶ

ಭಾರತದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 1.7 ನರ್ಸ್; ಡಬ್ಲ್ಯೂಹೆಚ್ ಒ ಮಾನದಂಡಕ್ಕಿಂತ ಕಡಿಮೆ: ಅಸೋಸಿಯೇಷನ್

Nagaraja AB

ನವದೆಹಲಿ: ನರ್ಸ್ ಮಿಡ್ ವೈಫ್ ಫಾರ್ ಚೆಂಜ್ ಅಭಿಯಾನಕ್ಕೆ ಒಂದು ವರ್ಷ ಮುಗಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಸಭೆಯಲ್ಲಿ ಅಭಿಯಾನದ ಪಾಲುದಾರರು, ಭಾರತೀಯ ನರ್ಸಿಂಗ್ ಕೌನ್ಸಿಲ್, ಅಖಿಲ ಭಾರತ ಸರ್ಕಾರಿ ನರ್ಸ್ ಗಳ ಫೆಡರೇಶನ್ (ಎಐಜಿಎನ್ ಎಫ್)  ಸೂಸೈಟಿ ಆಫ್ ಮಿಡ್ ವೈವ್ಸ್ ಇಂಡಿಯಾ (ಎಸ್ ಒಎಂಐ) ಮತ್ತಿತರ ಸಂಸ್ಥೆಗಳು ಜೊತೆಗೂಡಿ  ನರ್ಸ್ ಗಳು ಮತ್ತು ಸೂಲಗಿತ್ತಿ ವೃತ್ತಿಯಲ್ಲಿನ ಪರಿಣಾಮಗಳು ಮತ್ತು ಇಲ್ಲಿಯವರೆಗೂ ಆಗಿರುವ ಪ್ರಗತಿ ಕುರಿತು ಚರ್ಚೆ ನಡೆಸಲಾಯಿತು.

ದೇಶದ ಆರೋಗ್ಯ ಸೇವೆಯಲ್ಲಿ ನರ್ಸ್ ಗಳು ಮತ್ತು ಸೂಲಗಿತ್ತಿಯರ ಕೊಡುಗೆಯನ್ನು ತಜ್ಞರು ಪರಿಗಣಿಸಿದರು. ದೇಶದಲ್ಲಿನ ನರ್ಸ್ ಗಳು ಮತ್ತು ಸೂಲಗಿತ್ತಿಯರ ಸ್ಥಾನವನ್ನು ಮತ್ತಷ್ಟು ಬಲಪಡಿಸಬೇಕಾದ ಅಗತ್ಯತೆ ಕುರಿತಂತೆ ಸಭೆಯಲ್ಲಿ ಸಮಾಲೋಚಿಸಲಾಯಿತು. ಶಿಕ್ಷಣದಲ್ಲಿ ಹೂಡಿಕೆ. ನರ್ಸಿಂಗ್ ನಾಯಕತ್ವ, ನರ್ಸ್ ಗಳು ಮತ್ತು ರೋಗಿಗಳ ಅನುಪಾತ, ಕೆಲಸದ ಒತ್ತಡ, ಧೀರ್ಘ ಅವಧಿಯ ಕೆಲಸ, ಎರಡು ಪಾಳಿ ಕೆಲಸ ಮತ್ತಿತರ  ಪ್ರಮುಖ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಯಿತು. 

ಪ್ರಸ್ತುತ ದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 1.7 ನರ್ಸ್ ಗಳಿದ್ದಾರೆ. ಇದು ವಿಶ್ವ ಆರೋಗ್ಯ ಸಂಸ್ಥೆಯ 1,000 ಜನಸಂಖ್ಯೆಗೆ ಮೂರು ನರ್ಸ್ ಗಳ ಮಾನದಂಡಕ್ಕಿಂತ ಕಡಿಮೆಯಾಗಿದೆ. ನರ್ಸ್ ಗಳು - ರೋಗಿಗಳ ನಡುವಿನ ಅನುಪಾತ ಕೆಲಸದ ಒತ್ತಡ, ಧೀರ್ಘ ಅವಧಿಯ ಕೆಲಸ, ಎರಡು ಪಾಳಿಯ ಕೆಲಸ ಮತ್ತಿತರ ಕೆಲಸಗಳಿಗೆ ಕಾರಣವಾಗುತ್ತದ್ದು, ಉತ್ತಮ ಗುಣಮಟ್ಟದ ಚಿಕಿತ್ಸೆಯೂ ಸಿಗದಂತಾಗಿದೆ. ದೇಶದಲ್ಲಿ ಈ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಬೇಕಾಗಿದೆ.

ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ನರ್ಸ್ ಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸತತ ಪ್ರಯತ್ನದಿಂದಾಗಿ 2000ದಲ್ಲಿದ್ದ 1000 ಜನಸಂಖ್ಯೆಗೆ 0.8 ನರ್ಸ್ ಗಳ ಸಂಖ್ಯೆಯನ್ನು 2020ರಲ್ಲಿ 1.7ಕ್ಕೆ ಹೆಚ್ಚಿಸಲಾಗಿದೆ. ಆದಾಗ್ಯೂ, ಇದು ವಿಶ್ವ ಆರೋಗ್ಯ ಸಂಸ್ಥೆಯ 1000 ಜನಸಂಖ್ಯೆಗೆ 3 ಮೂರು ನರ್ಸ್ ಗಳೆಂಬ ಮಾನದಂಡಕ್ಕಿಂತ ಕಡಿಮೆಯಿದೆ. ವ್ಯವಸ್ಥಿತವಾದ ಸುಧಾರಣೆಯ ಅಗತ್ಯವಿದೆ ಎಂದು ಭಾರತೀಯ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಟಿ. ದಿಲೀಪ್ ಕುಮಾರ್ ಹೇಳಿದ್ದಾರೆ. 

SCROLL FOR NEXT