ದೇಶ

ಭಾರತೀಯ ರೈಲ್ವೆ ಇಲಾಖೆಯ ನೂತನ ಆಪ್ ಯುಟಿಎಸ್! ಏನಿದರ ವಿಶೇಷತೆ, ಪ್ರಯಾಣಿಕರಿಗೆಷ್ಟು ಅನುಕೂಲ?

Nagaraja AB

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕ ಸ್ನೇಹಿಯಾಗುತ್ತಿದೆ. ಕುಡಿಯುವ ನೀರು, ಆಹಾರ, ಟಿಕೆಟ್, ಬುಕ್ಕಿಂಗ್ ಸೇರಿದಂತೆ ಪ್ರತಿಯೊಂದರಲ್ಲಿ ಪ್ರಯಾಣಿಕರ ಕ್ಷೇಮ, ಕುಶಲತೆ, ಅನುಕೂಲತೆಯನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಯುಟಿಎಸ್ (ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ) ಆಪ್ ಬಿಡುಗಡೆಗೊಳಿಸಿದೆ.

ಇದರಿಂದ ಪ್ರಯಾಣಿಕರು ಟಿಕೆಟ್ ಗಾಗಿ ಪರದಾಡಬೇಕಿಲ್ಲ. ನೈರುತ್ಯ ರೈಲ್ವೆ ಇಲಾಖೆ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಈ ಸೇವೆ ಲಭ್ಯವಾಗುವಂತೆ ಮಾಡಿದೆ. ಈ ಮೂಲಕ ಪ್ರಯಾಣಿಕರು ಫ್ಲಾಟ್ ಫಾರ್ಮ್ ಟಿಕೆಟ್ ನ್ನು ಸಹ ಫೋನ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಯುಟಿಎಸ್ ಟಿಕೆಟ್ ಗಳು ರೈಲ್ವೆ ಕೌಂಟರ್ ಗಳು, ಟರ್ಮಿನಲ್ ಗಳಲ್ಲಿ ಲಭ್ಯವಿದೆ.

ಯುಟಿಎಸ್ ಟಿಕೆಟ್ ವಿತರಣೆ ಹೇಗೆ? ಪ್ರಯಾಣಿಕರು 200 ಕಿ.ಮೀ ಮತ್ತು ಅದಕ್ಕಿಂತ ಹೆಚ್ಚಿನ ಪ್ರಯಾಣಿಕ್ಕಾಗಿ ಮೂರು ದಿನಗಳ ಮುಂಚಿತವಾಗಿ (ಪ್ರಯಾಣದ ದಿನವನ್ನು ಹೊರತುಪಡಿಸಿ) ಕಾಯ್ದಿರಿಸದ ಟಿಕೆಟ್ ಖರೀದಿಸಬಹುದು. 

ಪ್ರಯಾಣಿಕರು ಅದೇ ದಿನದಲ್ಲಿ ಯಾವುದೇ ದೂರದ ಪ್ರಯಾಣವನ್ನು ಒಳಗೊಂಡಿರುವ ಟಿಕೆಟ್ ಖರೀದಿಸಬಹುದು. ಪ್ರಯಾಣಿಕರು ಈಗ ಅರ್ಧ ವಾರ್ಷಿಕ ಮತ್ತು ವಾರ್ಷಿಕ ಸೀಸನ್ ಟಿಕೆಟ್ ಗಳನ್ನು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಖರೀದಿಸಬಹುದು.

ಯುಟಿಎಸ್ ಆ್ಯಪ್ ಡೌನ್ ಲೋಡ್ ಹೇಗೆ?

ಆಂಡ್ರಾಯ್ಡ್ ಮೊಬೈಲ್ ಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಮೊಬೈಲ್ ಟಿಕೆಟಿಂಗ್ ಆ್ಯಪ್ ಡೌನ್ ಲೋಡ್ ಮಾಡಬಹುದು.

ಯುಟಿಎಸ್ ಯಾವ ಯಾವ ಸೇವೆ ನೀಡುತ್ತದೆ? ಸಬ್ ಅರ್ಬನ್ ಟಿಕೆಟ್ ಬುಕ್ಕಿಂಗ್, ಸಬ್ ಅರ್ಬನ್ ಟಿಕೆಟ್ ರದ್ದತಿ, ಫ್ಲಾಟ್ ಫಾರ್ಮ್ ಟಿಕೆಟ್ ಬುಕ್ಕಿಂಗ್, ಆರ್-ವ್ಯಾಲೆಟ್ ಬ್ಯಾಲೆನ್ಸ್ ಪರಿಶೀಲನೆ, ಬಳಕೆದಾರರ ಪ್ರೊಫೈಲ್ ನಿರ್ವಹಣೆ, ಬುಕ್ಕಿಂಗ್ ಇತಿಹಾಸ.

SCROLL FOR NEXT