ದೇಶ

ಅನರ್ಹತೆ ಭೀತಿ: ಯುಪಿಎ ಶಾಸಕರ ಸಭೆ ಕರೆದ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್

Lingaraj Badiger

ನವದೆಹಲಿ/ರಾಂಚಿ: ಜನತಾ ಪ್ರಾತಿನಿಧ್ಯ ಕಾಯಿದೆ, 1951ರ ಅಡಿಯಲ್ಲಿ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಶಿಫಾರಸು ಮಾಡಿದ ಮಾರನೇ ದಿನ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಶುಕ್ರವಾರ ಯುಪಿಎ ಶಾಸಕರ ಸಭೆ ಕರೆದಿದ್ದಾರೆ.

ಮುಂದಿನ ರಾಜಕೀಯ ತಂತ್ರಗಾರಿಕೆ ಕುರಿತು ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗವು ತನ್ನ ವರದಿಯನ್ನು ಗುರುವಾರ ರಾಜ್ಯಪಾಲ ರಮೇಶ್ ಬೈಸ್‌ಗೆ ಸಲ್ಲಿಸಿದೆ ಎಂಬ ವರದಿಗಳ ನಂತರ, ಇದಕ್ಕೆ ಪ್ರತಿಪಕ್ಷ ಬಿಜೆಪಿಯೇ ಕಾರಣ ಎಂದು ದೂಷಿಸಿದ್ದರು. ಬಿಜೆಪಿ ನಾಯಕರು ಮತ್ತು ಅವರ ಕೈಗೊಂಬೆಗಳು ಮುಚ್ಚಿದ ಕವರ್‌ನಲ್ಲಿರುವ ವರದಿಯನ್ನು ಸಿದ್ಧಪಡಿಸಿರುವಂತೆ ತೋರುತ್ತಿದೆ ಎಂದು ಸೋರೆನ್ ಆರೋಪಿಸಿದ್ದರು. 

ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅನರ್ಹತೆ ಭೀತಿ ಎದುರಿಸುತ್ತಿದ್ದು,  ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕೇಂದ್ರ ಚುನಾವಣಾ ಆಯೋಗ ಶಿಫಾರಸು ಮಾಡಿದೆ ಎನ್ನಲಾಗಿದೆ. ಈ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿದ್ದು, ಈ ಕುರಿತು ಚುನಾವಣಾ ಆಯೋಗ ಮಾತ್ರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

SCROLL FOR NEXT