ಮನೀಶ್ ತಿವಾರಿ 
ದೇಶ

'ಭಾರತ ಮತ್ತು ಕಾಂಗ್ರೆಸ್ ನಡುವಿನ ಸಮನ್ವಯದಲ್ಲಿ ಬಿರುಕು, ಆತ್ಮಾವಲೋಕನದ ಅಗತ್ಯವಿತ್ತು': ಮನೀಶ್ ತಿವಾರಿ

ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ 20ಕ್ಕೂ ಹೆಚ್ಚು ನಾಯಕರು ಪತ್ರ ಬರೆದಿದ್ದರು. 2020ರ ಡಿಸೆಂಬರ್ ನಲ್ಲಿ ನಡೆದ ಸಭೆಯಲ್ಲಿ ಬರಲಾಗಿದ್ದ ಸಹಮತವನ್ನು ಜಾರಿಗೆ ತರುತ್ತಿದ್ದರೆ ಇಂದಿನ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿತ್ತು ಎಂದು ಕೂಡ ಮನೀಶ್ ತಿವಾರಿ ಇಂಗ್ಲಿಷ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿರುವುದು ಭಾರೀ ಸಂಚಲನ ಸೃಷ್ಟಿಸಿದೆ. 1885ರಿಂದ ಅಸ್ತಿತ್ವದಲ್ಲಿದ್ದ ದೇಶದ ಅತಿದೊಡ್ಡ ಹಳೆಯ ಪಕ್ಷ ಕಾಂಗ್ರೆಸ್ ಮತ್ತು ಭಾರತ ದೇಶದ ನಡುವಿನ ಸಮನ್ವಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಾ ಹೋಯಿತು. ಇತ್ತೀಚಿನ ವರ್ಷಗಳಲ್ಲಿ ಪಕ್ಷ ಅನೇಕ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಉನ್ನತ ನಾಯಕತ್ವವು ಆತ್ಮಾವಲೋಕನಕ್ಕೆ ಕರೆ ನೀಡಿದ್ದರೆ ಗುಲಾಂ ನಬಿ ಆಜಾದ್ ಅವರ ರಾಜೀನಾಮೆಯನ್ನು ತಪ್ಪಿಸಬಹುದಾಗಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.

ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ 20ಕ್ಕೂ ಹೆಚ್ಚು ನಾಯಕರು ಪತ್ರ ಬರೆದಿದ್ದರು. 2020ರ ಡಿಸೆಂಬರ್ ನಲ್ಲಿ ನಡೆದ ಸಭೆಯಲ್ಲಿ ಬರಲಾಗಿದ್ದ ಸಹಮತವನ್ನು ಜಾರಿಗೆ ತರುತ್ತಿದ್ದರೆ ಇಂದಿನ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿತ್ತು ಎಂದು ಕೂಡ ಮನೀಶ್ ತಿವಾರಿ ಇಂಗ್ಲಿಷ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಭಾರತ ಮತ್ತು ಕಾಂಗ್ರೆಸ್ ನಡುವೆ ಇದ್ದ ಸಮನ್ವಯತೆಯಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭಿಸಿತು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ಡಿಸೆಂಬರ್ 2020ರಲ್ಲಿ ಸೋನಿಯಾ ಗಾಂಧಿಯವರ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಬಂದಿದ್ದ ಸಹಮತದ ಅಭಿಪ್ರಾಯಗಳನ್ನು ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಜಾರಿಗೊಳಿಸುತ್ತಾ ಹೋಗುತ್ತಿದ್ದರೆ ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.

ಪಕ್ಷದಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಎರಡು ವರ್ಷಗಳ ಹಿಂದೆ ಪಕ್ಷದ ಪರಿಸ್ಥಿತಿ ಚಿಂತಾಜನಕವಾಗಿದ್ದು, ಗಂಭೀರವಾಗಿ ಪರಿಗಣಿಸಬೇಕು ಎಂದು 23 ಮಂದಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೆವು. ಆ ಪತ್ರದ ನಂತರ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿತು. ಇಂದು ಕಾಂಗ್ರೆಸ್ ಮತ್ತು ಭಾರತ ವಿಭಿನ್ನವಾಗಿ ಯೋಚಿಸಲು ಪ್ರಾರಂಭಿಸಿದೆ ಎಂದಿದ್ದಾರೆ.

ನಮಗೆ ಯಾರಿಂದಲೂ ಪ್ರಮಾಣಪತ್ರ ಬೇಕಾಗಿಲ್ಲ. ನಾನು ಈ ಪಕ್ಷಕ್ಕಾಗಿ 42 ವರ್ಷ ದುಡಿದಿದ್ದೇನೆ. ನಾನು ಈ ಹಿಂದೆಯೇ ಹೇಳಿದ್ದೇನೆ, ನಾವು ಕಾಂಗ್ರೆಸ್ ನ ಬಾಡಿಗೆದಾರರಲ್ಲ, ನಾವು ಸದಸ್ಯರು". ಈಗ ನೀವು ನಮ್ಮನ್ನು ಹೊರಗೆ ತಳ್ಳಲು ಪ್ರಯತ್ನಿಸಿದರೆ, ಅದು ಬೇರೆ ವಿಷಯ ಎಂದಿದ್ದಾರೆ. 

Related Article

'ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿ ಬಿಟ್ಟರೆ ಯಾರಿದ್ದಾರೆ ಹೇಳಿ, ನನಗೆ ಪರ್ಯಾಯ ನಾಯಕ ಕಾಣುತ್ತಿಲ್ಲ': ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ನಿಂದ ಭಾರತ್ ಜೋಡೋ ಯಾತ್ರೆ: ನಾಳೆಯಿಂದ ಎರಡು ದಿನ ಬೆಂಗಳೂರಿನಲ್ಲಿ ನಾಯಕರಿಂದ ಸರಣಿ ಸಭೆ

ಗುಲಾಂ ನಬಿ ಆಜಾದ್ ನಿರ್ಗಮನ; 'ಕಾಂಗ್ರೆಸ್' ಭವಿಷ್ಯದ ಬಗ್ಗೆ ನಾಯಕರುಗಳಿಗೆ ಅನುಮಾನ; ಮತ್ತಷ್ಟು 'ಕೈ' ವಿಕೆಟ್ ಪತನ?

ಗುಲಾಂ ನಬಿ ಆಜಾದ್ ಬೆನ್ನಲ್ಲೇ ಮಾಜಿ ಸಚಿವ ಆರ್ ಎಸ್ ಚಿಬ್ ಸೇರಿ ಐವರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ!

ಕಾಂಗ್ರೆಸ್ ನಿಂದ ಭಾರತ ಜೋಡೋ ಯಾತ್ರೆಯ ನಕ್ಷೆ ಬಿಡುಗಡೆ

ಪಕ್ಷವನ್ನು 'ಸಂಪೂರ್ಣವಾಗಿ ನಾಶಪಡಿಸಲಾಗಿದೆ', ಇದಕ್ಕೆ ನಾಯಕತ್ವವೇ ನೇರ ಹೊಣೆ: ಕಾಂಗ್ರೆಸ್ ತ್ಯಜಿಸಿದ ಆಜಾದ್

ಗುಲಾಂ ನಬಿ ಆಜಾದ್ ರಾಜೀನಾಮೆ ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ; ಕಾಂಗ್ರೆಸ್ ತನ್ನ ಪಕ್ಷ ಜೋಡಿಸುವ ಕೆಲಸ ಮೊದಲು ಮಾಡಲಿ: ಬಿಜೆಪಿ ವ್ಯಂಗ್ಯ

ಗುಲಾಂ ನಬಿ ಆಜಾದ್ ಡಿಎನ್‌ಎ 'ಮೋದಿ-ಫೈಡ್' ಆಗಿದೆ: ಜೈರಾಮ್ ರಮೇಶ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT