ದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಭೂಕಂಪನ; ಐದು ದಿನಗಳಲ್ಲಿ 13 ಬಾರಿ ಕಂಪಿಸಿದ ಭೂಮಿ!

Ramyashree GN

ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಎರಡು ಲಘು ಭೂಕಂಪ ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ನಾಲ್ಕೂವರೆ ಗಂಟೆಗಳ ಅವಧಿಯಲ್ಲಿ 2.9 ಮತ್ತು 3.4 ರ ತೀವ್ರತೆಯ ಕಂಪನ ವರದಿಯಾಗಿವೆ ಎಂದು ಅವರು ಹೇಳಿದರು.

ಇದರೊಂದಿಗೆ, ಮಂಗಳವಾರದಿಂದ ಜಮ್ಮು ಪ್ರಾಂತ್ಯದ ದೋಡಾ, ಕಿಶ್ತ್ವಾರ್, ಕತ್ರಾ (ರಿಯಾಸಿ) ಮತ್ತು ಉಧಂಪುರ ಜಿಲ್ಲೆಗಳಲ್ಲಿ ಲಘು ತೀವ್ರತೆಯ ಒಟ್ಟು 13 ಭೂಕಂಪಗಳು ಸಂಭವಿಸಿವೆ. ಆದರೆ, ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾನೆ 4.32 ಗಂಟೆಗೆ ಸಂಭವಿಸಿದ ಮೊದಲ ಭೂಕಂಪನದ ಕೇಂದ್ರಬಿಂದುವು ಭದೆರ್ವಾ ಪಟ್ಟಣದ ನೈಋತ್ಯಕ್ಕೆ 26 ಕಿಲೋಮೀಟರ್ ದೂರದಲ್ಲಿ 32.87 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 75.46 ಡಿಗ್ರಿ ಪೂರ್ವ ರೇಖಾಂಶದಲ್ಲಿ 10 ಕಿಮೀ ಆಳದಲ್ಲಿದೆ ಎಂದು ಅವರು ಹೇಳಿದರು.

ಅದರ ನಂತರ ದೋಡಾ ಪಟ್ಟಣದ ಆಗ್ನೇಯಕ್ಕೆ ಐದು ಕಿಮೀ ದೂರದಲ್ಲಿ 9.06 ಗಂಟೆಗೆ ಮತ್ತೊಂದು ಕಂಪನ ಸಂಭವಿಸಿದೆ. 33.10 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 75.57 ಡಿಗ್ರಿ ಪೂರ್ವ ರೇಖಾಂಶದ ಐದು ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT