ಅವಳಿ ಕಟ್ಟಡಗಳು 
ದೇಶ

ನೋಯ್ಡಾ: ಅವಳಿ ಕಟ್ಟಡಗಳು ಕೆಲವೇ ಕ್ಷಣಗಳಲ್ಲಿ ಧ್ವಂಸ!

ಉತ್ತರ ಪ್ರದೇಶದ ನೋಯ್ಡಾದಲ್ಲಿನ  ಸೂಪರ್‌ಟೆಕ್‌ ಕಂಪನಿಯ ಅವಳಿ ಕಟ್ಟಡಗಳನ್ನು ಇಂದು  ಮಧ್ಯಾಹ್ನ ಸುರಕ್ಷಿತವಾಗಿ ಧ್ವಂಸಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಕ್ರಮವಾಗಿ ನಿರ್ಮಿಸಲಾಗಿರುವ ಸುಮಾರು100 ಮೀಟರ್‌ ಎತ್ತರದ ಅವಳಿ ಕಟ್ಟಡಗಳನ್ನು ಕೆಡವಲು ಎಂಜಿನಿಯರ್ ಗಳು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿನ  ಸೂಪರ್‌ಟೆಕ್‌ ಕಂಪನಿಯ ಅವಳಿ ಕಟ್ಟಡಗಳನ್ನು ಇಂದು  ಮಧ್ಯಾಹ್ನ ಸುರಕ್ಷಿತವಾಗಿ ಧ್ವಂಸಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಕ್ರಮವಾಗಿ ನಿರ್ಮಿಸಲಾಗಿರುವ ಸುಮಾರು100 ಮೀಟರ್‌ ಎತ್ತರದ ಅವಳಿ ಕಟ್ಟಡಗಳನ್ನು ಕೆಡವಲು ಎಂಜಿನಿಯರ್ ಗಳು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

ಈ ಅವಳಿ ಕಟ್ಟಡಗಳು ದೆಹಲಿಯ ಕುತುಬ್ ಮಿನಾರ್ ಗಿಂತ ಎತ್ತರದಲ್ಲಿದ್ದು, ವಾಟರ್ ಪಾಲ್ ಸ್ಫೋಟ ತಂತ್ರಜ್ಞಾನದಿಂದ 15 ಸೆಕೆಂಡ್ ಗಳಿಗಿಂತ ಕಡಿಮೆ ಅವಧಿಯಲ್ಲಿ ಇವುಗಳನ್ನು ನೆಲಸಮಗೊಳಿಸಲಾಗುವುದು,  ದೇಶದಲ್ಲಿ ಇನ್ನೂ ಕೆಡವಬಲ್ಲ ಎತ್ತರದ ಕಟ್ಟಡಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಹಲವಾರು ಜನರು ಸ್ಥಳದಲ್ಲಿ ಜಮಾಯಿಸಿ, ಸೆಲ್ಫಿ ಕ್ಲಿಕ್ಕಿಸಿ ಮತ್ತು ಎರಡು ಟವರ್‌ಗಳ ವೀಡಿಯೊ ತೆಗೆದುಕೊಂಡರು. 

ಇಂದು ಮಧ್ಯಾಹ್ನ 2.30ಕ್ಕೆ ನಿಗದಿತ ವೇಳಾಪಟ್ಟಿಯಂತೆ ಅವಳಿ ಗೋಪುರಗಳನ್ನು ಸುರಕ್ಷಿತವಾಗಿ ಕೆಡವಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ಶನಿವಾರ ಪಿಟಿಐಗೆ ತಿಳಿಸಿದ್ದಾರೆ. 

ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದು, ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಕಟ್ಟಡಗಳನ್ನು ಉರುಳಿಸಲು 3,700 ಕೆಜಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇತರ ಕಟ್ಟಡಗಳಿಗೆ ಯಾವುದೇ  ಹಾನಿಯಾಗದಂತೆ ನೆಲಸಮ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT