ಯುವಕನ ಶವ ಕಂಡುಬಂದ ಕಬ್ಬಿನ ಗದ್ದೆ (ಚಿತ್ರ-ಎಎನ್‌ಐ) 
ದೇಶ

ಅಂತರ್‌ಧರ್ಮೀಯ ಸಂಬಂಧ: 18 ವರ್ಷದ ಯುವಕ, ಬಾಲಕಿಯನ್ನು ಕೊಂದ ಕುಟುಂಬಸ್ಥರು

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಅಂತರ್‌ಧರ್ಮೀಯ ಸಂಬಂಧದ ಕಾರಣದ ಶಂಕಿತ ಕೊಲೆ ಪ್ರಕರಣವೊಂದರಲ್ಲಿ 18 ವರ್ಷದ ಯುವಕ ಮತ್ತು ಬಾಲಕಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಕಂಡು ಕುಟುಂಬಸ್ಥರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಬಸ್ತಿ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಅಂತರ್‌ಧರ್ಮೀಯ ಸಂಬಂಧದ ಕಾರಣದ ಶಂಕಿತ ಕೊಲೆ ಪ್ರಕರಣವೊಂದರಲ್ಲಿ 18 ವರ್ಷದ ಯುವಕ ಮತ್ತು ಬಾಲಕಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಕಂಡು ಕುಟುಂಬಸ್ಥರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ರುಧೌಲಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ದಂಪತಿಯನ್ನು ಕೊಂದ ಬಾಲಕಿ ಮನೆಯವರು, ಆಕೆಯ ಶವವನ್ನು ಹೂತು ಹಾಕಿದ್ದು, ಯುವಕನ ಶವವನ್ನು ಸಮೀಪದ ಕಬ್ಬಿನ ಗದ್ದೆಗೆ ಎಸೆದಿದ್ದಾರೆ.

ಬಾಲಕಿಯ ಶವವನ್ನು ಸಮಾಧಿಯಿಂದ ಹೊರತೆಗೆಯುವ ಪ್ರಕ್ರಿಯೆ ಆರಂಭವಾಗಿದ್ದು, ಎರಡೂ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೀಪೇಂದ್ರ ಚೌಧರಿ ತಿಳಿಸಿದ್ದಾರೆ.

'ಪೊಲೀಸರನ್ನು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಮತ್ತು ಈ ವಿಚಾರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಅಪರಾಧಿಗಳನ್ನು ಹಿಡಿಯಲಾಗುವುದು' ಎಂದು ಹೇಳಿದ್ದಾರೆ.

ಪರಾಸ್ ನಾಥ್ ಚೌಧರಿ ಎಂಬ ರೈತ ತನ್ನ ಕಬ್ಬಿನ ಗದ್ದೆಯಲ್ಲಿ ಯುವಕನ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ರುಧೌಲಿ ಪೊಲೀಸ್ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್ ರಾಮಕೃಷ್ಣ ಮಿಶ್ರಾ ಅವರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಯುವಕನ ದೇಹದ ಮೇಲೆ ಹಲವಾರು ಗಾಯದ ಗುರುತುಗಳು ಕಂಡುಬಂದಿವೆ. ಮೃತ ದೇಹ ಪತ್ತೆಯಾದಾಗ, ಎಲ್ಲಾ ಗುಂಡಿಗಳನ್ನು ತೆರೆದಿರುವ ಹಸಿರು ಶರ್ಟ್ ಧರಿಸಿದ್ದರು ಮತ್ತು ಅವರ ಪ್ಯಾಂಟ್ ಕಾಲಿನ ಕೆಳಗೆ ಜಾರಿತ್ತು.

ರಾತ್ರಿ ಮನೆಯಿಂದ ಹೋದ ಯುವಕ ವಾಪಸ್ ಬಾರದೆ, ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಪೊಲೀಸರು ಸೋದರನ ಮನೆಗೆ ತಲುಪಿದಾಗ ಅವನ ಸಹೋದರಿಯನ್ನು ಕೂಡ ಹಿಂದಿನ ರಾತ್ರಿ ಸಾಯಿಸಿ, ಸಮಾಧಿ ಮಾಡಲಾಗಿತ್ತು.

'ರಾತ್ರಿ ವೇಳೆ ನಿಗೂಢವಾಗಿ ಬಾಲಕಿಯನ್ನು ಸಮಾಧಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬಾಲಕಿಯ ಕುಟುಂಬದವರು ಮರ್ಯಾದಾ ಹತ್ಯೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಚೌಧರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್