ದೇಶ

ವಡೋದರಾ: ಗಣೇಶ ಮೆರವಣಿಗೆ ವೇಳೆ ಕೋಮು ಸಂಘರ್ಷ

Srinivas Rao BV

ವಡೋದರ: ಗಣೇಶ ಹಬ್ಬದ ಸಂದರ್ಭದಲ್ಲಿ ಸಡಗರ ಇರಬೇಕಾದ ಬದಲು ಕೋಮು ಸಂಘರ್ಷದ ಘಟನೆ ಗುಜರಾತ್ ನ ವಡೋದರ ನಗರದಲ್ಲಿ ವರದಿಯಾಗಿದೆ.

ಗಣೇಶ ಮೆರವಣಿಗೆ ವೇಳೆ, ಎರಡು ಸಮುದಾಯದ ಸದಸ್ಯರ ನಡುವೆ ಸಂಘರ್ಷ ಉಂಟಾಗಿದ್ದು, ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ 13 ಮಂದಿಯನ್ನು ಪೊಲೀಸರು ಈ ವರೆಗೂ ಬಂಧಿಸಿದು, ಉಭಯ ಸಮುದಾಯಗಳ ಸದಸ್ಯರ ವಿರುದ್ಧ ಗಲಭೆ ಮತ್ತು ಕಾನೂನುಬಾಹಿರ ಸಭೆ ಆರೋಪದ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಮಾಂಡ್ವಿ ಪ್ರದೇಶದಲ್ಲಿ ಬೆಳಿಗ್ಗೆ 11:15 ರ ವೇಳೆಗೆ  ಪಾನಿಗೇಟ್ ದರ್ವಾಜಾ ಬಳಿ ಮೆರವಣಿಗೆ ತೆರಳುತ್ತಿದ್ದಾಗ, ವಾಗ್ವಾದದಲ್ಲಿ ಆರಂಭಗೊಂಡ ಈ ಕಹಿ ಘಟನೆ ವಿಕೋಪಕ್ಕೆ ತಿರುಗಿ ಕೋಮು ಸಂಘರ್ಷದ ರೂಪ ಪಡೆದುಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕಾನೂನು ಸುವ್ಯವಸ್ಥೆಗಾಗಿ ಘಟನಾ ಸ್ಥಳದಲ್ಲಿ ಪೊಲೀಸ್ ಪಡೆಯ ನಿಯೋಜನೆಯನ್ನು ಹೆಚ್ಚಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಂಟಿ ಆಯುಕ್ತ ಚಿರಾಗ್ ಕೊರಾಡಿಯಾ ಹೇಳಿದ್ದಾರೆ.
 

SCROLL FOR NEXT