ಸಾಂದರ್ಭಿಕ ಚಿತ್ರ 
ದೇಶ

ಜಾರ್ಖಂಡ್: ಬಿಜೆಪಿ ನಾಯಕಿಯಿಂದ ಮನೆಗೆಲಸದ ಮಹಿಳೆಗೆ ಚಿತ್ರಹಿಂಸೆ, ಮೂತ್ರ ಕುಡಿಯುವಂತೆ ಒತ್ತಾಯ

ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರು ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ರಾಂಚಿ: ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರು ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

29 ವರ್ಷದ ಮಹಿಳೆ ಸುನೀತಾಗೆ ಸೀಮಾ ಬಿಸಿ ಬಾಣಲೆಯಿಂದ ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದ್ದು, ಮನೆಗೆಲಸದ ಮಹಿಳೆಯ ದೇಹದಲ್ಲಿ ಹತ್ತಾರು ಗಾಯಗಳಾಗಿದ್ದು, ಪ್ರಸ್ತುತ ರಾಂಚಿಯ ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾರ್ಖಂಡ್ ಸರ್ಕಾರದ ಸಿಬ್ಬಂದಿ ಇಲಾಖೆಯ ಅಧಿಕಾರಿ ನೀಡಿದ ಮಾಹಿತಿಯ ಮೇರೆಗೆ ರಾಂಚಿ ಪೊಲೀಸರು ಆಗಸ್ಟ್ 22 ರಂದು ರಾಂಚಿಯ ಅಶೋಕನಗರದಲ್ಲಿರುವ ಬಿಜೆಪಿ ನಾಯಕಿಯ ನಿವಾಸದಿಂದ ಮಹಿಳೆಯನ್ನು ರಕ್ಷಿಸಲಾಗಿದೆ.

ಜಾರ್ಖಂಡ್‌ನ ನಿವೃತ್ತ ಐಎಎಸ್ ಅಧಿಕಾರಿ ಮಹೇಶ್ವರ್ ಪಾತ್ರ ಅವರ ಪತ್ನಿಯೂ ಆಗಿರುವ ಸೀಮಾ ಪಾತ್ರಾ ಅವರನ್ನು ಇನ್ನೂ ಬಂಧಿಸಲಾಗಿಲ್ಲ.

ಬುಡಕಟ್ಟು ಸಮುದಾಯದಿಂದ ಬಂದಿರುವ ಸುನೀತಾ ಅವರು ಗುಮ್ಲಾ ಗ್ರಾಮದವರಾಗಿದ್ದು, ಸುಮಾರು 10 ವರ್ಷಗಳಿಂದ ನಿವೃತ್ತ ಐಎಎಸ್ ಅಧಿಕಾರಿ ಮಹೇಶ್ವರ್ ಪಾತ್ರಾ ಮತ್ತು ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರ ಮನೆಯಲ್ಲಿ ಸೇವಕಿಯಾಗಿ ಕೆಲಸ ಮಾಡುತ್ತಿದ್ದರು. 

ಸುನೀತಾಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. ಮನೆಗೆ ಹೋಗಲು ಅನುಮತಿ ಕೇಳಿದಾಗ ಆಕೆಯನ್ನು ಥಳಿಸಿ ಕೋಣೆಯೊಳಗೆ ಬೀಗ ಹಾಕಿದ್ದರು. ಊಟ, ನೀರು ಕೂಡ ನೀಡುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. 

ರಾಡ್‍ಗಳಿಂದ ಹಲ್ಲೆ ನಡೆಸಿ ಹಲ್ಲುಗಳನ್ನೆಲ್ಲಾ ಮುರಿಯಲಾಗಿದೆ. ಅಲ್ಲದೆ ತನಗೆ ಮೂತ್ರ ಸೇವನೆ ಮಾಡುವಂತೆ ಮತ್ತು ನಾಲಿಗೆಯಿಂದ ನೆಲವನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸುತ್ತಿದ್ದರು. ನಾನೇನು ತಪ್ಪು ಮಾಡಿದೆ ಎಂದೇ ಹೇಳದೆಯೇ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಐದು ದಿನ ಇರಾನ್ Power Plant ಗಳ ಮೇಲೆ ದಾಳಿ ಮಾಡಲ್ಲ..': Trump ತಾತ್ಕಾಲಿಕ ಕದನ ವಿರಾಮ ಘೋಷಣೆ! ಮಾತುಕತೆ ನಿರಾಕರಿಸಿದ ಇರಾನ್

West Asia Crisis: ಮುಳುಗಿದ D-Street; 13.5 ಲಕ್ಷ ಕೋಟಿ ನಿರ್ನಾಮ!

ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಉಮರ್ ಖಾಲಿದ್‌ ನಾಮನಿರ್ದೇಶನಕ್ಕೆ ಮುಸ್ಲಿಂ ಸಂಘಟನೆಗಳ ಒತ್ತಾಯ!

ಭಾರತ vs ಪಾಕಿಸ್ತಾನ ಅಲ್ಲ, ಇನ್ಮುಂದೆ Afghanistan vs Pakistan: ನೆರೆ ರಾಷ್ಟ್ರದ Rivalry ಬಿಚ್ಚಿಟ್ಟ ಆಫ್ಘನ್ ಆಟಗಾರ!

ಕೆಟ್ಟ ಮೇಲೆ ಬುದ್ದಿ: ಭಾರತದ ಜೊತೆ ಉತ್ತಮ ಸಂಬಂಧ ಬಯಸುತ್ತೇವೆ: ಬಾಂಗ್ಲಾದೇಶ ಯೂಟರ್ನ್, IPL ಪ್ರಸಾರಕ್ಕೆ ಚಿಂತನೆ

SCROLL FOR NEXT