ದೇಶ

ದೇಶದಲ್ಲಿ 24 ಲಕ್ಷ ಹೆಚ್ ಐವಿ ಪೀಡಿತರು! ಮಹಾರಾಷ್ಟ್ರ, ಆಂಧ್ರ, ಕರ್ನಾಟಕದಲ್ಲಿ ಹೆಚ್ಚಿನ ಜನರಲ್ಲಿ ಏಡ್ಡ್ಸ್

Nagaraja AB

ನವದೆಹಲಿ: ಗುರುವಾರ ಬಿಡುಗಡೆಯಾಗಿರುವ  ಹೆಚ್ ಐವಿ ಪೀಡಿತರ ಅಂದಾಜು ವರದಿ 2021ರ ಪ್ರಕಾರ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯ ವರದಿಯೊಂದಿಗೆ ದೇಶದಲ್ಲಿ ಅಂದಾಜು 24 ಲಕ್ಷ ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ.  

ಕೇಂದ್ರ ಆರೋಗ್ಯ ಸಚಿವಾಲಯದ ವರದಿ 2021 ರಲ್ಲಿ ವಾರ್ಷಿಕ ಹೊಸದಾದ ಸೋಂಕುಗಳ ಸಂಖ್ಯೆ ಸುಮಾರು 63,000 ಎಂದು ಅಂದಾಜಿಸಲಾಗಿದೆ. ಇದು 2010 ರಿಂದ ಶೇ.  46.3 ರಷ್ಟು ಇಳಿಕೆಯಾಗಿದೆ.

ಹಿಮಾಚಲ ಪ್ರದೇಶ (ಶೇ. 43), ತಮಿಳುನಾಡು (ಶೇ. 72), ಮತ್ತು ತೆಲಂಗಾಣ (ಶೇ. 71) ಗಳಲ್ಲಿ ತ್ವರಿತ ಕುಸಿತ ಕಂಡುಬಂದಿದ್ದು, ಹೆಚ್ಚಿನ ರಾಜ್ಯಗಳಲ್ಲಿ ಕುಸಿತದ ಪ್ರವೃತ್ತಿಯನ್ನು ಗುರುತಿಸಲಾಗಿದೆ. ಆದಾಗ್ಯೂ, ತ್ರಿಪುರಾ, ಮೇಘಾಲಯ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೋರಾಂ, ಕೇಂದ್ರಾಡಳಿತ ಪ್ರದೇಶ ಡಿಯು ಮತ್ತು ದಾಮನ್, ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಹೊಸ  ಪ್ರಕರಣಗಳ ಸಂಖ್ಯೆ ವರದಿಯಾಗಿದೆ.

ಕಳೆದ ವರ್ಷ  ಏಡ್ಸ್ಡ್ ಸಂಬಂಧಿತ ಸಾವಿನ ಸಂಖ್ಯೆ ಅಂದಾಜು 42,000 ರಷ್ಟಿದ್ದು, 2010 ರಿಂದ 2021ರವರೆಗೂ ಶೇ. 75.5 ರಷ್ಟು ಕುಸಿತ ಕಂಡಿದೆ ಎಂದು ವರದಿ ಹೇಳಿದೆ. ಪುದುಚೇರಿ, ಅರುಣಾಚಾಲ ಪ್ರದೇಶ, ಮೇಘಾಲಯ ಮತ್ತು ತ್ರಿಪುರಾ ಹೊರತುಪಡಿಸಿದಂತೆ ಉಳಿದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕುಸಿತದ ಪ್ರವೃತ್ತಿ ಕಂಡುಬಂದಿದೆ.

ಚಂಡೀಘಡ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಏಡ್ಸ್ಡ್ ಸಂಬಂಧಿತ ಕಾಯಿಲೆಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತವಾಗಿದೆ ಎಂದು ವರದಿ ತಿಳಿಸಿದೆ. 

SCROLL FOR NEXT