ದೇಶ

ಬಿಹಾರದಲ್ಲಿ ಜನವರಿ 7 ರಿಂದ ಎರಡು ಹಂತದಲ್ಲಿ ಜಾತಿ ಗಣತಿ

Lingaraj Badiger

ಪಾಟ್ನಾ: ಬಿಹಾರದಲ್ಲಿ ಮಂಡಲ್ ರಾಜಕೀಯದ ಮೇಲೆ ಹೆಚ್ಚು ಪ್ರಭಾವ ಬೀರಲಿರುವ ಜಾತಿ ಆಧಾರಿತ ಜನಗಣತಿ ಜನವರಿ 7 ರಿಂದ ಪ್ರಾರಂಭವಾಗಲಿದ್ದು, ಎರಡು ಹಂತಗಳಲ್ಲಿ ನಡೆಯಲಿದೆ. 

ಮೊದಲ ಹಂತದಲ್ಲಿ, ರಾಜ್ಯದ ಎಲ್ಲಾ ಕುಟುಂಬಗಳ ಸಂಖ್ಯೆಯನ್ನು ಎಣಿಸಲಾಗುತ್ತದೆ. ಎರಡನೇ ಹಂತದಲ್ಲಿ, ಮಾರ್ಚ್‌ನಿಂದ ಎಲ್ಲಾ ಜಾತಿಗಳು ಮತ್ತು ಉಪ ಜಾತಿಗಳು ಹಾಗೂ ಧರ್ಮಗಳ ಜನರಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. ಗಣತಿದಾರರು ಎಲ್ಲಾ ಜನರ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿಯನ್ನು ದಾಖಲಿಸುತ್ತಾರೆ.

ಜಾತಿ ಆಧಾರದಲ್ಲಿ ಅವರ ಜನಸಂಖ್ಯೆ ಮತ್ತು ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ರಾಜ್ಯ ಸರ್ಕಾರ ನೀತಿಗಳನ್ನು ರೂಪಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 

ರಾಜ್ಯ ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಜನವರಿ 21ಕ್ಕೆ ಮೊದಲ ಹಂತದ ಗಣತಿ ಕಾರ್ಯ ಪೂರ್ಣಗೊಳ್ಳಲಿದ್ದು, ಡಿಸೆಂಬರ್ 15ರಿಂದ ಗಣತಿದಾರರಿಗೆ ತರಬೇತಿ ಕೂಡ ನಡೆಯಲಿದೆ.

ಬಿಹಾರ ಸಚಿವ ಸಂಪುಟ ರಾಜ್ಯದಲ್ಲಿ ಜಾತಿ ಆಧಾರಿತ ಗಣತಿಯ ಅವಧಿಯನ್ನು ಮೂರು ತಿಂಗಳು ವಿಸ್ತರಿಸಿದ್ದು, ಮೇ 2023ಕ್ಕೆ ಪೂರ್ಣಗೊಳಿಸಲು ಅಂತಿಮ ಗಡುವು ನೀಡಿದೆ. ರಾಜ್ಯ ಸರ್ಕಾರ ಇದಕ್ಕಾಗಿ 500 ಕೋಟಿ ಖರ್ಚು ಮಾಡಲಿದೆ. 

SCROLL FOR NEXT