ದೇಶ

ಒಬ್ಬನನ್ನೇ ಮದುವೆಯಾದ ಅವಳಿ ಸೋದರಿಯರು: ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಸೂಚನೆ

Ramyashree GN

ಮುಂಬೈ/ಸೊಲ್ಲಾಪುರ: ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಮುಂಬೈನ ವ್ಯಕ್ತಿಯೊಬ್ಬ ಅವಳಿ ಸೋದರಿಯರನ್ನು ಮದುವೆಯಾಗಿರುವ ವರದಿಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಸೊಲ್ಲಾಪುರ ಪೊಲೀಸರಿಗೆ ಸೋಮವಾರ ಸೂಚಿಸಿದೆ.

ಎಂಎಸ್‌ಸಿಡಬ್ಲ್ಯು ಅಧ್ಯಕ್ಷೆ ರೂಪಾಲಿ ಚಾಕಂಕರ್ ಅವರು ಸೊಲ್ಲಾಪುರ ಪೊಲೀಸ್ ಅಧೀಕ್ಷಕರನ್ನು ವಿಚಾರಿಸಿ, ಐಪಿಸಿ ಸೆಕ್ಷನ್ 494 ರ ಅಡಿಯಲ್ಲಿ ಕಾನೂನುಬಾಹಿರ ವಿವಾಹದ ಅಡಿಯಲ್ಲಿ ಕ್ರಮ ಕೈಗೊಳ್ಳಲು ಮತ್ತು ಆದ್ಯತೆಯ ಮೇರೆಗೆ ಎಂಎಸ್‌ಸಿಡಬ್ಲ್ಯುಗೆ ವರದಿ ಸಲ್ಲಿಸುವಂತೆ ಕೇಳಿದ್ದಾರೆ.

ಮುಂಬೈನ ಅತುಲ್ ಯು ಅವತಾಡೆ ಎಂಬಾತ ಅವಳಿ ಸಹೋದರಿಯರಾದ ರಿಂಕಿ ಎಂ ಪಡ್ಗಾಂವ್ಕರ್ ಮತ್ತು ಪಿಂಕಿ ಎಂ ಪಡ್ಗಾಂವ್ಕರ್ ಎಂಬುವವರನ್ನು ವಿವಾಹವಾಗಿದ್ದಾರೆ. 36 ವರ್ಷ ವಯಸ್ಸಿನವರಾದ ಇವರಿಬ್ಬರು ಎಂಜಿನಿಯರ್ ಆಗಿದ್ದಾರೆ. ಮುಂಬೈನಲ್ಲಿ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಪಶ್ಚಿಮ ಕಾಂದಿವಲಿಯಲ್ಲಿ ವಾಸಿಸುತ್ತಿದ್ದಾರೆ.

ಡಿಸೆಂಬರ್ 2 ರಂದು 300 ಅತಿಥಿಗಳು ಎದುರು ವಿವಾಹವಾಗಿದ್ದು, ಅತಿಥಿಗಳು ಶುಭ ಹಾರೈಸಿದ್ದಾರೆ. ಆದರೆ, ಅಕ್ಲುಜ್‌ನಲ್ಲಿ ನಡೆದ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಇತ್ತೀಚಿನ ವರದಿಗಳ ಪ್ರಕಾರ, ಅವತಾಡೆ ಈಗಾಗಲೇ ಮದುವೆಯಾಗಿದ್ದು, ಅವರ ಮೊದಲ ಪತ್ನಿ ಈ ಮದುವೆಗೆ ಆಕ್ಷೇಪಣೆಯನ್ನು ಎತ್ತಿದ್ದರು ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.

ಈ ಮದುವೆಯ ವಿಡಿಯೋ ನೋಡಿದ ಕೆಲವರು ತಪ್ಪು ಎಂದಿದ್ದರೆ, ಇನ್ನೂ ಕೆಲವರು ಕೆಲವರಿಗೆ ಒಬ್ಬ ಹುಡುಗಿಯನ್ನು ಪಡೆಯುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಏಕಕಾಲದಲ್ಲಿ ಇಬ್ಬರನ್ನು ಮದುವೆಯಾಗುತ್ತಿದ್ದಾಲೆ ಎಂದಿದ್ದಾರೆ.

ಅಂತಿಮವಾಗಿ, ಸ್ಥಳೀಯ ನಿವಾಸಿ ರಾಹುಲ್ ಬಿ. ಫುಲೆ ಎನ್ನುವವರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದು, ಡಿಸೆಂಬರ್ 3 ರಂದು ನಾನ್-ಕಾಗ್ನೈಸಬಲ್ ಅಪರಾಧ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ.

ಪ್ರತಿಭಟನೆಗಳ ಹೊರತಾಗಿಯೂ ವರ ಮತ್ತು 'ಅವಳಿ ವಧುಗಳ' ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ ಎಂದು ಪ್ರಾಥಮಿಕ ಪೋಲೀಸ್ ತನಿಖೆಯಿಂದ ತಿಳಿದುಬಂದಿದೆ.

SCROLL FOR NEXT