ದೇಶ

ಗುಜರಾತ್ ವಿಧಾನಸಭಾ ಚುನಾವಣೆ: "ದೇಶಕ್ಕಾಗಿ ಬಹಳ ಶ್ರಮಿಸಿದ್ದೀಯ, ಸ್ವಲ್ಪ ವಿಶ್ರಾಂತಿ ಪಡೆಯಬೇಕು"; ಮೋದಿಗೆ ಭಾವುಕ ಅಣ್ಣನ ಸಲಹೆ

Srinivas Rao BV

ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರ ಹಿರಿಯ ಸಹೋದರ ಸೋಮಭಾಯ್ ಮೋದಿ ಅಹ್ಮದಾಬಾದ್ ನಲ್ಲಿ ಮತ ಚಲಾವಣೆ ಮಾಡಿದ್ದಾರೆ.

ನಿಶಾನ್ ಪಬ್ಲಿಕ್ ಶಾಲೆಯಲ್ಲಿ ಸೋಮಭಾಯ್ ಮೋದಿ ಮತ ಚಲಾಯಿಸಿದ್ದು, ಇದೇ ಮತಗಟ್ಟೆಯಲ್ಲಿ ಪ್ರಧಾನಿ ಮೋದಿ ಸಹ ಮತ ಚಲಾಯಿಸಿದ್ದರು.

ಮತದಾನದ ಬಳಿಕ ಸೋಮಭಾಯ್ ಮೋದಿ ಭಾವುಕರಾಗಿದ್ದರು ಹಾಗೂ ಮೊನ್ನೆ ಸೋಮವಾರ ಸಹೋದರ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದನ್ನು ಸ್ಮರಿಸಿಕೊಂಡರು. "ನೀನು ದೇಶಕ್ಕಾಗಿ ಬಹಳ ಶ್ರಮಿಸುತ್ತೀಯ, ಅದೇ ರೀತಿ ಸ್ವಲ್ಪ ವಿಶ್ರಾಂತಿಯನ್ನೂ ಪಡೆಯಬೇಕು" ಎಂದು   ಸಹೋದರ ಮೋದಿಯೊಂದಿಗೆ ಮಾತನಾಡಿದಾಗ ಹೇಳಿದ್ದಾಗಿ ಸೋಮಭಾಯ್ ತಿಳಿಸಿದ್ದಾರೆ.

ಇದನ್ನೂ ಓದಿ: ಗುಜರಾತ್ ವಿಧಾನಸಭಾ ಚುನಾವಣೆ: ಸರತಿ ಸಾಲಿನಲ್ಲಿ ನಿಂತು ಮತ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ
 
2014 ರಿಂದ ಮೋದಿ ರಾಷ್ಟ್ರ ಮಟ್ಟದಲ್ಲಿ ಮಾಡುತ್ತಿರುವ ಕೆಲಸಗಳನ್ನು ದೇಶದ ಜನತೆ ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಇದನ್ನೇ ಜನತೆ ಗುಜರಾತ್ ನ ವಿಧಾನಸಭಾ ಚುನಾವಣೆಗೂ ಆಧಾರವಾಗಿರಿಸಿಕೊಳ್ಳಲಿದ್ದಾರೆ. ಮತದಾರರಿಗೆ ನನ್ನ ಸಂದೇಶ ಇಷ್ಟೇ, ನೀವು ನಿಮ್ಮ ಮತಗಳನ್ನು ಚೆನ್ನಾಗಿ ಬಳಸಿಕೊಳ್ಳಿ ಎಂಬುದಾಗಿದೆ. ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವ ಪಕ್ಷಕ್ಕೆ ಮತ ಹಾಕಿ ಎಂಬುದಷ್ಟೇ ನನ್ನ ಮನವಿಯಾಗಿದೆ" ಎಂದು ಸೋಮಭಾಯ್ ಹೇಳಿದ್ದಾರೆ.

SCROLL FOR NEXT