ದೇಶ

ಪಿಎಂ ಮೋದಿಯವರ ನೀತಿಗಳಿಂದಾಗಿ ಭಾರತ ವಿಭಜನೆಯ ಸಾಧ್ಯತೆ ಹೆಚ್ಚಾಗಿದೆ: ಜೈರಾಮ್ ರಮೇಶ್

Vishwanath S

ಜೈಪುರ: ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳಿಂದಾಗಿ ಭಾರತ ವಿಭಜನೆಯ ಸಾಧ್ಯತೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ. 

'ದೇಶಕ್ಕೆ ಪ್ರಮುಖವಾಗಿ ಮೂರು ಸವಾಲುಗಳಿದ್ದು ಅವುಗಳ ವಿರುದ್ಧ ಹೋರಾಡಬೇಕಿದೆ. ಪ್ರಧಾನ ಮಂತ್ರಿಯ ಉದ್ದೇಶ ಮತ್ತು ನೀತಿಗಳಿಂದಾಗಿ ಭಾರತದಲ್ಲಿ ವಿಭಜನೆಯ ಸಾಧ್ಯತೆ ಹೆಚ್ಚಾಗಿದೆ. ಆರ್ಥಿಕ ಅಸಮಾನತೆ. ವಿಭಜಕ ಸಿದ್ಧಾಂತವು ಇತರ ಎರಡು ಸವಾಲುಗಳು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವರು, 'ರಾಜಕೀಯ ಸರ್ವಾಧಿಕಾರವು ವಾಸ್ತವವಾಗುತ್ತಿದೆ. ಇದು ಒಂದು ರಾಷ್ಟ್ರ-ಒಬ್ಬ ವ್ಯಕ್ತಿಗೆ ಸೀಮಿತವಾಗಿದೆ. ಒಬ್ಬ ವ್ಯಕ್ತಿಗೆ ಎಲ್ಲಾ ರಾಜಕೀಯ ಹಕ್ಕುಗಳನ್ನು ನೀಡಲಾಗುತ್ತಿದೆ. ಸಂವಿಧಾನವನ್ನು ನಿರ್ಲಕ್ಷಿಸಲಾಗುತ್ತಿದ್ದು ಸಾಂವಿಧಾನಿಕ ಸಂಸ್ಥೆಗಳು ದುರ್ಬಲಗೊಳ್ಳುತ್ತಿವೆ ಎಂದು ಆರೋಪಿಸಿದರು.

ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಿಳಿಯಲು ಭಾರತ್ ಜೋಡೊ ಯಾತ್ರೆ ಯೋಜಿಸಲಾಗಿದೆ ಎಂದು ರಮೇಶ್ ಹೇಳಿದ್ದಾರೆ. ಯಾತ್ರೆ ಭಾನುವಾರ ರಾಜಸ್ಥಾನಕ್ಕೆ ಪ್ರವೇಶಿಸಿದೆ. ಇದು ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿದ್ದು ಇದುವರೆಗೆ ದಕ್ಷಿಣದ ಐದು ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣವನ್ನು ಒಳಗೊಂಡಿದೆ. ನಂತರ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮೂಲಕ ಸಂಚರಿಸಿದೆ.

SCROLL FOR NEXT