‘ಮಾಂಡೂಸ್‌’ ಚಂಡಮಾರುತದ ಪ್ರಭಾವದಿಂದ ಧರೆಗುರುಳಿರುವ ಮರಗಳು 
ದೇಶ

‘ಮಾಂಡೂಸ್‌’ ಚಂಡಮಾರುತ: ಆಂಧ್ರ ಪ್ರದೇಶದ 6 ಜಿಲ್ಲೆಗಳಲ್ಲಿ ಭಾರಿ ಮಳೆ, ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು

ಮಾಂಡೂಸ್‌ ಚಂಡಮಾರುತವು ಶನಿವಾರ ಮಧ್ಯರಾತ್ರಿ 1.30 ರ ಸುಮಾರಿಗೆ ಪುದುಚೇರಿ ಮತ್ತು ಶ್ರೀಕಾಳಹಸ್ತಿ ನಡುವೆ ಮಹಾಬಲಿಪುರಂ ಬಳಿ ಕರಾವಳಿಯನ್ನು ಹಾದುಹೋಗುತ್ತಿದ್ದಂತೆ, ಆಂಧ್ರ ಪ್ರದೇಶದ ಆರು ಜಿಲ್ಲೆಗಳಲ್ಲಿ ತೀವ್ರತರವಾದ ಹಾನಿಯುಂಟಾಗಿದೆ.

ತಿರುಪತಿ/ವಿಜಯವಾಡ: ಮಾಂಡೂಸ್‌ ಚಂಡಮಾರುತವು ಶನಿವಾರ ಮಧ್ಯರಾತ್ರಿ 1.30 ರ ಸುಮಾರಿಗೆ ಪುದುಚೇರಿ ಮತ್ತು ಶ್ರೀಕಾಳಹಸ್ತಿ ನಡುವೆ ಮಹಾಬಲಿಪುರಂ ಬಳಿ ಕರಾವಳಿಯನ್ನು ಹಾದುಹೋಗುತ್ತಿದ್ದಂತೆ, ಆಂಧ್ರ ಪ್ರದೇಶದ ಆರು ಜಿಲ್ಲೆಗಳಲ್ಲಿ ತೀವ್ರತರವಾದ ಹಾನಿಯುಂಟಾಗಿದೆ. ಭೂಕುಸಿತ ಸಂಭವಿಸಿದ್ದು, ಚಂಡಮಾರುತವು ದುರ್ಬಲಗೊಂಡಿದೆ ಮತ್ತು ನಂತರ ಪಶ್ಚಿಮಕ್ಕೆ ಚಲಿಸುವಾಗ ಮತ್ತಷ್ಟು ದುರ್ಬಲಗೊಂಡಿದೆ.

ಚಂಡಮಾರುತದ ಪ್ರಭಾವದಿಂದಾಗಿ ನೆಲ್ಲೂರು, ತಿರುಪತಿ, ಚಿತ್ತೂರು, ಪ್ರಕಾಶಂ, ಅನ್ನಮಯ್ಯ, ಕಡಪ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಶನಿವಾರ ಸಂಜೆ ವೇಳೆಗೆ, ಇದು ಕಡಿಮೆ ಒತ್ತಡದ ಪ್ರದೇಶವಾಗಿ ದುರ್ಬಲಗೊಂಡಿತು ಮತ್ತು ಕ್ರಮೇಣ ಮತ್ತಷ್ಟು ದುರ್ಬಲಗೊಳ್ಳುತ್ತದೆ.

ಚಂಡಮಾರುತವು ದುರ್ಬಲವಾಗಿದ್ದರೂ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅನಂತಪುರದ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ, ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ. ನೆಲ್ಲೂರಿನಲ್ಲಿ, ಕೋವೂರು ಮಂಡಲದ ಇನಾಮಡುಗು ಗ್ರಾಮದಲ್ಲಿ 33 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಅತಿವೇಗದ ಗಾಳಿಯಿಂದಾಗಿ ಹಲವಾರು ವಿದ್ಯುತ್ ಕಂಬಗಳು ನೆರಕ್ಕುರುಳಿರುವುದರಿಂದ ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ತುಳಿದು ಸಾವಿಗೀಡಾಗಿದ್ದಾರೆ.

ಗ್ರಾಮದ ಹಳೇ ಹರಿಜನವಾಡದ ದಾರ್ಲಾ ಶ್ರೀನಿವಾಸುಲು ಮೃತ ವ್ಯಕ್ತಿ. ಕಾಲುವೆಗಳು ಮತ್ತು ಟ್ಯಾಂಕ್‌ಗಳು ತುಂಬಿ ಹರಿಯುತ್ತಿರುವ ಕಾರಣ ಹಲವು ಗ್ರಾಮಗಳ ನಡುವೆ ಸಾರಿಗೆ ಸಂಪರ್ಕ ಕಡಿತಗೊಂಡಿದ್ದರಿಂದ ಆರು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ನೆಲ್ಲೂರು ಜಿಲ್ಲೆಯ ಎಎಸ್ ಪೇಟ ಮಂಡಲದ ರಾಜವೋಲು ಗ್ರಾಮದ ಸ್ಥಳೀಯ ತೊಟ್ಟಿಯೊಂದು ಭಾರಿ ಮಳೆಗೆ ಒಡೆದಿದ್ದರಿಂದ 15 ದಿನಗಳ ಹಿಂದೆ ಬಿತ್ತಿದ ಭತ್ತದ ಸಸಿಗಳು ಮುಳುಗಡೆಯಾಗಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಪೆಲ್ಲಕೂರ್ ಮಂಡಲದಲ್ಲಿ ಆರು ಕುರಿಗಳು ಮೃತಪಟ್ಟಿವೆ. ಶ್ರೀಕಾಳಹಸ್ತಿಯಲ್ಲಿ ಎರಡು ಎಮ್ಮೆಗಳು ಮತ್ತು ತಿರುಪತಿ ಜಿಲ್ಲೆಯ ತೊಟ್ಟಂಬೆಡು ಮಂಡಲದಲ್ಲಿ ಮೂರು ಹಸುಗಳು ಮೃತಪಟ್ಟಿವೆ.

ಆಂಧ್ರಪ್ರದೇಶ ರಾಜ್ಯ ಅಭಿವೃದ್ಧಿ ಯೋಜನಾ ಸೊಸೈಟಿ (ಎಪಿಎಸ್‌ಡಿಎಂಎ) ಜೊತೆಗೆ, ಮುಖ್ಯಮಂತ್ರಿ ಕಚೇರಿ ಮತ್ತು ಮುಖ್ಯ ಕಾರ್ಯದರ್ಶಿ ಕೆ.ಎಸ್. ಜವಾಹರ್ ರೆಡ್ಡಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚಂಡಮಾರುತ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ಕೂಡ ನಡೆಸಲಾಯಿತು.

ವಿಶೇಷ ಮುಖ್ಯ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಜಿ. ಸಾಯಿ ಪ್ರಸಾದ್ ಅವರು ಚಂಡಮಾರುತವು ದುರ್ಬಲಗೊಂಡಿದ್ದರೂ, ಆಂಧ್ರ ಪ್ರದೇಶದ ದಕ್ಷಿಣ ಕರಾವಳಿ ಮತ್ತು ರಾಯಲಸೀಮಾ ಜಿಲ್ಲೆಗಳ ಜನರು ಇನ್ನೆರಡು ದಿನಗಳ ಕಾಲ ಜಾಗರೂಕರಾಗಿರಬೇಕು ಎಂದು ಹೇಳಿದರು.

ಆರು ಜಿಲ್ಲೆಗಳಲ್ಲಿ 32 ಮಂಡಲಗಳು ಹಾನಿಗೊಳಗಾಗಿವೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ 708 ಜನರನ್ನು ತಗ್ಗು ಪ್ರದೇಶಗಳಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 33 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. 1,469 ಆಹಾರ ಪ್ಯಾಕೆಟ್‌ಗಳು ಮತ್ತು 2,495 ಅನ್ನು ಪೂರೈಸಲಾಗಿದೆ. ನೀರಿನ ಪ್ಯಾಕೇಟ್‌ಗಳನ್ನು ಸರಬರಾಜು ಮಾಡಲಾಗಿದೆ ಎಂದು ವಿಶೇಷ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಐದು ಎನ್‌ಡಿಆರ್‌ಎಫ್ ಮತ್ತು 4 ಎಸ್‌ಡಿಆರ್‌ಎಫ್ ತಂಡಗಳ ಸೇವೆಗಳನ್ನು ಬಳಸಿಕೊಳ್ಳಲಾಗಿದೆ.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ನೆಲ್ಲೂರು ಮತ್ತು ತಿರುಪತಿ ಜಿಲ್ಲೆಗಳ ಪ್ರದೇಶಗಳಲ್ಲಿ ಹೆಚ್ಚಿನ ಹಾನಿಗೊಳಗಾಗಿವೆ.

ಐಎಂಡಿ ಪ್ರಕಾರ, ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿಯಲ್ಲಿ ಶನಿವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ 23 ಸೆಂ.ಮೀ ಮಳೆಯಾಗಿದೆ. ತಿರುಪತಿಯ ತೊಟ್ಟಂಬೆಡುವಿನಲ್ಲಿ 22 ಸೆಂ.ಮೀ, ಗುಡೂರಿನಲ್ಲಿ 20 ಸೆಂ.ಮೀ ಮಳೆಯಾಗಿದೆ. ಅನ್ನಮಯ್ಯ ಜಿಲ್ಲೆಯ ಕೋಡೂರಿನಲ್ಲಿಯೂ 20 ಸೆಂ.ಮೀ ಮಳೆಯಾಗಿದ್ದು, ಚಿತ್ತೂರು ಜಿಲ್ಲೆಯ ನಗರಿಯಲ್ಲಿ 19 ಸೆಂ.ಮೀ ಮತ್ತು ತಿರುಪತಿಯ ವೆಂಕಟಗಿರಿಯಲ್ಲಿ 17 ಸೆಂ.ಮೀ ಮಳೆ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT