ವಿದ್ಯಾರ್ಥಿಗಳಿದ್ದ ಬಸ್ ಅಪಘಾತ 
ದೇಶ

ಪಿಕ್​ನಿಕ್​ ಮುಗಿಸಿ ವಾಪಸಾಗುತ್ತಿದ್ದ ಶಾಲಾ ಬಸ್ ಪಲ್ಟಿ: ಇಬ್ಬರು ವಿದ್ಯಾರ್ಥಿಗಳ ಸಾವು, 47 ಮಂದಿಗೆ ಗಾಯ

ಪಿಕ್​ನಿಕ್​ ಮುಗಿಸಿ ಮರಳುತ್ತಿದ್ದ ಶಾಲಾ ಬಸ್​ವೊಂದು ಅಪಘಾತಕ್ಕೀಡಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸಂಭವಿಸಿದೆ.

ಮುಂಬಯಿ: ಪಿಕ್​ನಿಕ್​ ಮುಗಿಸಿ ಮರಳುತ್ತಿದ್ದ ಶಾಲಾ ಬಸ್​ವೊಂದು ಅಪಘಾತಕ್ಕೀಡಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸಂಭವಿಸಿದೆ. ಇಲ್ಲಿನ ಲೊಮವಲಾಗೆ ಪಿಕ್​ನಿಕ್​ಗೆ ತೆರಳಿದ್ದ ವಿದ್ಯಾರ್ಥಿಗಳಿದ್ದ ಬಸ್​​ ಖೋಪೊಲಿ ಹಿಲ್​ ಸ್ಟೇಷನ್​ನಲ್ಲಿ​ ಅಪಘಾತಕ್ಕೆ ಒಳಗಾಗಿದೆ.

ಪಿಕ್‌ನಿಕ್ ಮುಗಿಸಿಕೊಂಡು ಲೋನವಾಲದಿಂದ ಹಿಂದಿರುಗುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ರೇಕ್​ ಫೇಲ್​ ಆಗಿದ್ದರಿಂದ ಬಸ್​ ನಿಯಂತ್ರಣಕ್ಕೆ ಸಿಗಲಿಲ್ಲ ಎಂದು ಡ್ರೈವರ್​ ತಿಳಿಸಿದ್ದಾರೆ.

ಲೋನವಾಲ ಗಿರಿಧಾಮದಿಂದ 14 ಕಿ.ಮೀ ದೂರದ ಹಳೆ ಮುಂಬೈ–ಪುಣೆ ಹೆದ್ದಾರಿಯಲ್ಲಿ ಮ್ಯಾಜಿಕ್ ಪಾಯಿಂಟ್ ಹಿಲ್ ಸಮೀಪ ರಾತ್ರಿ 8ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ ಸಬ್‌–ಅರ್ಬನ್ ಪ್ರದೇಶದ ಚೆಂಬೂರಿನ ಕೋಚಿಂಗ್ ಕ್ಲಾಸ್‌ವೊಂದರ ಸುಮಾರು 49 ವಿದ್ಯಾರ್ಥಿಗಳು ಖಾಸಗಿ ಬಸ್‌ನಲ್ಲಿ ಪಿಕ್‌ನಿಕ್‌ಗೆ ತೆರಳಿದ್ದರು. ವಿದ್ಯಾರ್ಥಿಗಳೆಲ್ಲರೂ 10ನೇ ತರಗತಿಯವರು ಎಂದು ತಿಳಿದು ಬಂದಿದೆ.

'ಲೋನವಾಲದಲ್ಲಿ ಪಿಕ್ನಿಕ್‌ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ, ಬ್ರೇಕ್ ವೈಫಲ್ಯದಿಂದಾಗಿ ಖೊಪೊಲಿ ಬಳಿಯ ಘಾಟಿಯಲ್ಲಿ (ಗುಡ್ಡಗಾಡು ರಸ್ತೆ) ಬಸ್‌ ಚಾಲಕನು ವಾಹನದ ಮೇಲೆ ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ" ಎಂದು ಅಧಿಕಾರಿ ಹೇಳಿದರು.

ಅಪಘಾತದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಚಾಲಕನಿಗೆ ಗಾಯಗಳಾಗಿವೆ, ಅವರನ್ನು ಲೋನವಾಲ ಮತ್ತು ಖೊಪೊಲಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ 17 ಮತ್ತು 16 ವರ್ಷದ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 100ಕ್ಕೆ ಏರಿಕೆ, ಹಲವರಿಗೆ ಗಾಯ

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!