ಮಹಿಳೆಯಿಂದ ಸರ ದೋಚುತ್ತಿರುವ ಚಿತ್ರ 
ದೇಶ

ಹಾಡಹಗಲೇ ಗನ್ ಪಾಯಿಂಟ್ ನಲ್ಲಿ ಮಹಿಳೆಯ ಸರ ದೋಚಿದ ದುಷ್ಕರ್ಮಿ; ವಿಡಿಯೋ

ಹಾಡಹಗಲೇ ಗನ್ ಪಾಯಿಂಟ್ ನಲ್ಲಿ ಮಹಿಳೆಯೊಬ್ಬರ  ಸರ ದೋಚಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಮಾಸ್ಕ್ ಧರಿಸಿದ ದುಷ್ಕರ್ಮಿ ಗನ್ ಪಾಯಿಂಟ್ ನಲ್ಲಿ ಮಹಿಳೆಯನ್ನು ಬೆದರಿಸಿ, ಸರವನ್ನು ಕಿತ್ತುಕೊಂಡಿದ್ದಾನೆ. ನಂತರ ಅಲ್ಲಿಯೇ ಇದ್ದ ಹುಡುಗನಿಗೂ ಇದೇ ರೀತಿಯಲ್ಲಿ ಬೆದರಿಸಿ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಗಾಜಿಯಾಬಾದ್: ಹಾಡಹಗಲೇ ಗನ್ ಪಾಯಿಂಟ್ ನಲ್ಲಿ ಮಹಿಳೆಯೊಬ್ಬರ  ಸರ ದೋಚಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಮಾಸ್ಕ್ ಧರಿಸಿದ ದುಷ್ಕರ್ಮಿ ಗನ್ ಪಾಯಿಂಟ್ ನಲ್ಲಿ ಮಹಿಳೆಯನ್ನು ಬೆದರಿಸಿ, ಸರವನ್ನು ಕಿತ್ತುಕೊಂಡಿದ್ದಾನೆ. ನಂತರ ಅಲ್ಲಿಯೇ ಇದ್ದ ಹುಡುಗನಿಗೂ ಇದೇ ರೀತಿಯಲ್ಲಿ ಬೆದರಿಸಿ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಉತ್ತರ ಪ್ರದೇಶದ ಗಾಜಿಯಾಬಾದ್ ನ ಗೋಕುಲ್ ದಾಮ್ ನಲ್ಲಿ ಈ ಅಪರಾಧ ನಡೆದಿದ್ದು, ಸಿಸಿಟಿವಿಯಲ್ಲಿ ದರೋಡೆಯ ದೃಶ್ಯಾವಳಿ ಸೆರೆಯಾಗಿದೆ. ಆದರೆ ಈವರೆಗೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ. 

ಮಹಿಳೆ ಮನೆಯಿಂದ ಹೊರಗಡೆ ಬಂದಾಗ ಈ ಘಟನೆ ನಡೆದಿದೆ. ದುಷ್ಕರ್ಮಿ ಗನ್ ತೋರಿಸಿ ಬೆದರಿಸಿದ ನಂತರ ಮಹಿಳೆ ಸರ ನೀಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ನಂತರ ಆಕೆಯ ಮಗನಿಂದ ಮೊಬೈಲ್ ಫೋನ್ ಕಸಿದುಕೊಳ್ಳಲಾಗಿದೆ.

ಈ ಸಂಬಂಧ ಕೇಸ್ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ತಂಡವೊಂದನ್ನು ರಚಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಲೊನಿ ಡಿಎಸ್ ಪಿ ರಜ್ನೀಶ್ ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!