ದೇಶ

9 ರಾಜ್ಯಗಳು ಸಿಬಿಐಗೆ ಮುಕ್ತ ಸಮ್ಮತಿ ಹಿಂಪಡೆದಿವೆ: ಕೇಂದ್ರ ಸರ್ಕಾರ

Lingaraj Badiger

ನವದೆಹಲಿ: ತೆಲಂಗಾಣ ಮತ್ತು ಮೇಘಾಲಯ ಸೇರಿದಂತೆ ಒಂಬತ್ತು ರಾಜ್ಯಗಳು ತಮ್ಮ ರಾಜ್ಯದ ಪ್ರಕರಣಗಳ ತನಿಖೆಗೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ಹಿಂಪಡೆದಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಹೇಳಿದ್ದಾರೆ.

ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ(ಡಿಎಸ್‌ಪಿಇ) ಕಾಯಿದೆ, 1946ರ ಸೆಕ್ಷನ್ 6ರ ಪ್ರಕಾರ, ಸಿಬಿಐ, ಇತರ ರಾಜ್ಯಗಳ  ಅಧಿಕಾರ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಆಯಾ ರಾಜ್ಯ ಸರ್ಕಾರಗಳಿಂದ ಒಪ್ಪಿಗೆ ಪಡೆಯಬೇಕು ಎಂದು ಅವರು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದರು.

DSPE ಕಾಯಿದೆ, 1946 ರ ಸೆಕ್ಷನ್ 6 ರ ನಿಬಂಧನೆಗಳ ಪ್ರಕಾರ, ನಿರ್ದಿಷ್ಟ ವರ್ಗದ ವ್ಯಕ್ತಿಗಳ ವಿರುದ್ಧದ ನಿರ್ದಿಷ್ಟ ವರ್ಗದ ಅಪರಾಧಗಳ ತನಿಖೆಗಾಗಿ ರಾಜ್ಯ ಸರ್ಕಾರಗಳು ಸಿಬಿಐಗೆ ಮುಕ್ತ ಸಮ್ಮತಿಯನ್ನು ನೀಡಿವೆ. ಆ ಮೂಲಕ ನಿರ್ದಿಷ್ಟ ಪ್ರಕರಣಗಳನ್ನು ದಾಖಲಿಸಲು ಮತ್ತು ತನಿಖೆ ಮಾಡಲು ಏಜೆನ್ಸಿಗೆ ಅನುವು ಮಾಡಿಕೊಡುತ್ತದೆ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಸಿಂಗ್ ಹೇಳಿದ್ದಾರೆ.

ಛತ್ತೀಸ್‌ಗಢ, ಜಾರ್ಖಂಡ್, ಕೇರಳ, ಮೇಘಾಲಯ, ಮಿಜೋರಾಂ, ಪಂಜಾಬ್, ರಾಜಸ್ಥಾನ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸರ್ಕಾರ ತಮ್ಮ ರಾಜ್ಯದಲ್ಲಿನ ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ಹಿಂಪಡೆದಿವೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT