ದೇಶ

ತೀರ್ಥಯಾತ್ರೆ ಕ್ಷೇತ್ರಗಳಿಗಾಗಿಯೆ ಪ್ರತ್ಯೇಕ "ಮಂತ್ರಾಲಯ"ಕ್ಕೆ ವಿಹೆಚ್ ಪಿ ಆಗ್ರಹ

Srinivas Rao BV

ನವದೆಹಲಿ: ದೇಶಾದ್ಯಂತ ತೀರ್ಥಯಾತ್ರೆ ಸ್ಥಳಗಳಿಗಾಗಿಯೇ ಪ್ರತ್ಯೇಕ ಮಂತ್ರಾಲಯವನ್ನು ಸೃಷ್ಟಿಸುವಂತೆ ವಿಶ್ವ ಹಿಂದೂ ಪರಿಷತ್ ಕೇಂದ್ರ, ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದೆ. 

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭಾಗವಾಗಿರುವ, ವಿಹೆಚ್ ಪಿ, ಪ್ರತಿ ರಾಜ್ಯಗಳಲ್ಲೂ ಇಂಥಹದ್ದೊಂದು ಸಚಿವಾಲಯ ನಿರ್ಮಾಣವಾಗಬೇಕು ಎಂದು ಹೇಳಿದೆ.
 
ವಿಹೆಚ್ ಪಿಯ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ತೀರ್ಥ ಯಾತ್ರೆಯ ಪ್ರದೇಶಗಳನ್ನು ಪ್ರವಾಸಿ ಪ್ರದೇಶಗಳನ್ನಾಗಿ ಅಭಿವೃದ್ಧಿಪಡಿಸಬಾರದು, ಅದು ಬೇರೆಯ ರೀತಿಯಲ್ಲೇ ಅಭಿವೃದ್ಧಿಹೊಂದಬೇಕು ಎಂದು ಹೇಳಿದ್ದಾರೆ.

2014-15 ರಲ್ಲಿ ಪ್ರಧಾನಿ ಮೋದಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಭಾಗವಾಗಿದ್ದ  ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ವರ್ಧನೆ ಅಭಿಯಾನವನ್ನು ಪ್ರಾರಂಭಿಸಿದ್ದರು ಈ ಯೋಜನೆಯಡಿ ಹಲವು ತೀರ್ಥ ಯಾತ್ರೆ ಪ್ರದೇಶಗಳು ಹಾಗೂ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 
 
ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ ಪ್ರವಾಸೋದ್ಯಮ ಸಚಿವಾಲಯ, ಥೀಮ್ ಆಧಾರಿತ ಪ್ರವಾಸೋದ್ಯಮ ಸರ್ಕ್ಯೂಟ್ ಗಳನ್ನು ಅಭಿವೃದ್ಧಿಪಡಿಸಲು ಆರ್ಥಿಕ ನೆರವು ನೀಡಲಿದೆ.
 
ತೀರ್ಥಯಾತ್ರೆ ಕ್ಷೇತ್ರಗಳನ್ನು ಪ್ರವಾಸೀ ಕ್ಷೇತ್ರಗಳಂತೆ ಅಭಿವೃದ್ಧಿಮಾಡುವುದಕ್ಕೆ ಸಾಧ್ಯವಿಲ್ಲ ಏಕೆಂದರೆ ಅವುಗಳ ನಡುವೆ ಅಂತರವಿದೆ. ಆದ್ದರಿಂದ ತೀರ್ಥ ಕ್ಷೇತ್ರಗಳ ಅಭಿವೃದ್ಧಿಗೆ ಪ್ರತ್ಯೇಕ ಮಂತ್ರಾಲಯವನ್ನೇ ಪ್ರಾರಂಭಿಸಬೇಕು ಎಂದು ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಒತ್ತಾಯಿಸಿದ್ದಾರೆ.

SCROLL FOR NEXT