ದೇಶ

ಸೆನ್ಸಾರ್ ಮಂಡಳಿ 'ಪಠಾಣ್' ಚಿತ್ರದ ಬೇಷರಂ ರಂಗ್ ಹಾಡಿಗೆ ಕತ್ತರಿ ಹಾಕಬಹುದು: ಉಮಾ ಭಾರತಿ

Lingaraj Badiger

ನವದೆಹಲಿ: ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ವಿವಾದಾತ್ಮಕ ಬೇಷರಂ ರಂಗ್ ಹಾಡನ್ನು ತೆಗೆದುಹಾಕುವ ಆಯ್ಕೆಯನ್ನು ಸೆನ್ಸಾರ್ ಮಂಡಳಿ ಹೊಂದಿದೆ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಉಮಾ ಭಾರತಿ ಅವರು ಬುಧವಾರ ಹೇಳಿದ್ದಾರೆ.

‘ಬೇಷರಂ ರಂಗ್’ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿರುವ ಹಿಂದೂಪರ ಸಂಘಟನೆಗಳು, ಶಾರುಖ್ ಖಾನ್ ಗೆ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುತ್ತಿವೆ.

ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಮಾ ಭಾರತಿ, ಶಾರುಖ್ ಅವರ ವಿರುದ್ಧದ ದ್ವೇಷಕ್ಕೆ ಸ್ವತಃ ಶಾರುಖ್ ಅವರೇ ಕಾರಣ. ಏಕೆಂದರೆ ಶಾರುಖ್, ಸೈಫ್ (ಸೈಫ್ ಅಲಿ ಖಾನ್) ಮತ್ತು ಅಮೀರ್(ಅಮೀರ್ ಖಾನ್) ಅವರು ಈ ಹಿಂದೆ ಭಾರತದಲ್ಲಿ ಭಯದ ವಾತಾವರಣ ಇದೆ ಎಂದು ಹೇಳಿದ್ದರು.

ಆದರೆ ನೂಪುರ್ ಶರ್ಮಾ ಹೇಳಿಕೆಯ ನಂತರ(ಕೆಲವು ತಿಂಗಳ ಹಿಂದೆ ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆ)ಅವರು ಒಮ್ಮೆಯೂ ಮಾತನಾಡಲಿಲ್ಲ ಎಂದರು.

ಜನವರಿ ಅಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಪಠಾಣ್ ಚಿತ್ರದ ವಿವಾದಾತ್ಮಕ ಹಾಡನ್ನು ತೆಗೆದುಹಾಕುವುದು ಸೆನ್ಸಾರ್ ಮಂಡಳಿಯ ಕೈಯಲ್ಲಿದೆ ಎಂದು ಮಾಜಿ ಕೇಂದ್ರ ಸಚಿವೆ ಹೇಳಿದ್ದಾರೆ.

SCROLL FOR NEXT