ಉತ್ತರಾಖಂಡ್: ಉತ್ತರಾಖಂಡ್ ನ ಧಾರ್ಚುಲಾದಲ್ಲಿ ನಡೆಯುತ್ತಿರುವ ಕಾಮಗಾರಿ ವೇಳೆ ನೇಪಾಳದಿಂದ ಕಲ್ಲು ತೂರಾಟ ನಡೆದಿದೆ.
ನೀರಾವರಿ ಇಲಾಖೆ ಕಾಮಗಾರಿ ಇದಾಗಿದ್ದು, ಘಟನೆಯಲ್ಲಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಫರ್ಜಾನ್ ಅಹಮದ್ ಸ್ಪಷ್ಟಪಡಿಸಿದ್ದಾರೆ. ಘಟನೆಯಲ್ಲಿ ಡಂಪರ್ ಹಾನಿಗೊಳಗಾಗಿದ್ದು, ಕಾರ್ಯನಿರ್ವಾಹಕ ಎಂಜಿನಿಯರ್ ಗಾಯಗೊಂಡಿದ್ದಾರೆ.
ಎಎನ್ಐ ಜೊತೆಗೆ ಕಾರ್ಯನಿರ್ವಾಹಕ ಇಂಜಿನಿಯರ್ ಈ ಬಗ್ಗೆ ಮಾತನಾಡಿದ್ದು, ಕಲ್ಲು ತೂರಾಟ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಹಿಂದೆ ಕಲ್ಲು ತೂರಾಟ ನಡೆದಿದ್ದಾಗ ಡಿ.06 ರಂದು ಭಾರತ ನೇಪಾಳಕ್ಕೆ ಸಂಪರ್ಕ ಕಲ್ಪಿಸುವ ತೂಗು ಸೇತುವೆಯನ್ನು ಸ್ಥಗಿತಗೊಳಿಸಿತ್ತು.
ಕಲ್ಲು ತೂರಾಟದ ಘಟನೆಯ ನಂತರ, ವ್ಯಾಪಾರಿಗಳು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಕಾಳಿ ನದಿಯ ಬಳಿ ಗೋಡೆ ನಿರ್ಮಾಣ ಮಾಡುವ ಕಾಮಗಾರಿ ಈ ಭಾಗದಲ್ಲಿ ಪ್ರಗತಿಯಲ್ಲಿದ್ದು, ಕಾಳಿ ನದಿ ನೇಪಾಳ ಹಾಗೂ ಭಾರತಕ್ಕೆ ಗಡಿಯಾಗಿದೆ. ಕಾಳಿ ನದಿಯಾದ್ಯಂತ ಸುರಕ್ಷತಾ ಗೋಡೆ ನಿರ್ಮಿಸಲಾಗುತ್ತಿದೆ.