ದೇಶ

ದೆಹಲಿ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ರ್ಯಾಂಡಮ್ ಕೊರೋನಾ ಟೆಸ್ಟ್: ಕೆಲವರಲ್ಲಿ ಪಾಸಿಟಿವ್ ವರದಿ

Sumana Upadhyaya

ನವದೆಹಲಿ: ನಿನ್ನೆ ಭಾನುವಾರ ದೆಹಲಿ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರ ಯಾದೃಚ್ಛಿಕ ಕೋವಿಡ್ ಪರೀಕ್ಷೆಯು(Random covid test) ಎರಡನೇ ದಿನವಾದ ಇಂದು ಸೋಮವಾರವೂ ಮುಂದುವರಿದಿದೆ. ಕೆಲವು ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ, ಮೊನ್ನೆ ಶನಿವಾರ ಬೆಳಗ್ಗೆ 10 ರಿಂದ ನಿನ್ನೆ ಭಾನುವಾರ ಸಂಜೆ 7 ರವರೆಗೆ 455 ಪ್ರಯಾಣಿಕರನ್ನು ಯಾದೃಚ್ಛಿಕ ಕೊರೋನಾವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಅವುಗಳಲ್ಲಿ ಅರ್ಧಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣಗಳಾಗಿವೆ ಎಂದು ಜೆನೆಸ್ಟ್ರಿಂಗ್ ಡಯಾಗ್ನೋಸ್ಟಿಕ್ ಸೆಂಟರ್‌ನ ಅಧಿಕಾರಿ ತಿಳಿಸಿದ್ದಾರೆ.

ನಿರ್ದಿಷ್ಟ ವಿವರಗಳನ್ನು ತಕ್ಷಣವೇ ಕಂಡುಹಿಡಿಯಲಾಗಲಿಲ್ಲ. ಜೆನೆಸ್ಟ್ರಿಂಗ್ಸ್ ದೆಹಲಿ ವಿಮಾನ ನಿಲ್ದಾಣದಲ್ಲಿ ಕೊರೋನವೈರಸ್ ಪರೀಕ್ಷೆಗಳನ್ನು ನಡೆಸುತ್ತಿದೆ.

ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೋನವೈರಸ್ ಪ್ರಕರಣಗಳ ಉಲ್ಬಣದ ಮಧ್ಯೆ ಶನಿವಾರದಿಂದ ಪ್ರತಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಬರುವ ಶೇಕಡಾ ಎರಡರಷ್ಟು ಪ್ರಯಾಣಿಕರಿಗೆ ಯಾದೃಚ್ಛಿಕ ಕೊರೋನಾವೈರಸ್ ಪರೀಕ್ಷೆಯನ್ನು ಸರ್ಕಾರವು ಕಡ್ಡಾಯಗೊಳಿಸಿದೆ.

ಸರಾಸರಿ 25,000 ಪ್ರಯಾಣಿಕರು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGIA) ಆಗಮಿಸುತ್ತಾರೆ ಮತ್ತು ಅವರಲ್ಲಿ 500 ಯಾದೃಚ್ಛಿಕ ಪ್ರಯಾಣಿಕರನ್ನು ಪರೀಕ್ಷಿಸಲಾಗುತ್ತಿದೆ ಎಂದು ಅದು ಹೇಳಿದೆ. ಕಂಪನಿಯು ವಿಮಾನ ನಿಲ್ದಾಣದಲ್ಲಿ ಮಾದರಿ ಸಂಗ್ರಹಣೆ ಮತ್ತು ಪರೀಕ್ಷೆಗಾಗಿ ಸಿಬ್ಬಂದಿಯನ್ನು ಹೆಚ್ಚಿಸಿದೆ. 

ಕೋವಿಡ್ ನಿರ್ವಹಣೆಗೆ ಸಂಪೂರ್ಣವಾಗಿ ಸಿದ್ಧರಾಗುವುದರ ಜೊತೆಗೆ ಲಭ್ಯತೆ ಮತ್ತು ಸಮಯೋಚಿತ ವರದಿಯನ್ನು ಖಚಿತಪಡಿಸಿಕೊಳ್ಳಲು ನಾವು ಸೌಲಭ್ಯದಲ್ಲಿ ಲ್ಯಾಬ್ ತಂತ್ರಜ್ಞರ ಮಾನವಶಕ್ತಿಯನ್ನು ಹೆಚ್ಚಿಸಿದ್ದೇವೆ' ಎಂದು ಜೆನೆಸ್ಟ್ರಿಂಗ್ಸ್ ಸಂಸ್ಥಾಪಕ ಗೌರಿ ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೇಡಿಕೆಗೆ ಅನುಗುಣವಾಗಿ ಮಾನವಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಜೆನೆಸ್ಟ್ರಿಂಗ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಕೊಹ್ಲಿ ಹೇಳಿದ್ದಾರೆ. 

SCROLL FOR NEXT