ದೇಶ

ತಮಿಳುನಾಡಿಗೆ ಚೀನಾದಿಂದ ಆಗಮಿಸಿದ ತಾಯಿ ಮಗುವಿಗೆ ಕೋವಿಡ್ ಸೋಂಕು ದೃಢ

Srinivas Rao BV

ಮಧುರೈ: ಚೀನಾದಿಂದ ತಮಿಳುನಾಡಿಗೆ ಆಗಮಿಸಿದ ತಾಯಿ ಮಗುವಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. 

ಮಧುರೈ ವಿಮಾನ ನಿಲ್ದಾಣದಲ್ಲಿ ನಡೆಸಿದ ತಪಾಸಣೆ ವೇಳೆಯಲ್ಲಿ ಚೀನಾದಿಂದ ಬಂದವರಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 

ಮಧುರೈ ಬಳಿ ಇರುವ ವಿರುದುನಗರ್ ನವರಾಗಿರುವ ತಾಯಿ-ಮಗಳನ್ನು ಆರ್ ಟಿ-ಪಿಸಿಆರ್ ಗೆ ಒಳಪಡಿಸಲಾಗಿತ್ತು, ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿರುದುನಗರ್ ನ  ಮನೆಯಲ್ಲಿ ಐಸೊಲೇಷನ್ ಗೆ ಒಳಪಟ್ಟಿದ್ದಾರೆ. ಅವರ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.

ಮಂಗಳವಾರ ಒಂದೇ ದಿನ ತಮಿಳುನಾಡಿನಲ್ಲಿ 10 ಕೋವಿಡ್ ಪಾಸಿಟೀವ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 51 ಕ್ಕೆ ಏರಿಕೆಯಾಗಿದೆ.

ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಏಕಾ ಏಕಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ವಿಮಾನ ನಿಲ್ದಾಣಗಳಿಂದ ಆಗಮಿಸುವವರನ್ನು ತಮಿಳುನಾಡು ಸರ್ಕಾರ ತೀವ್ರವಾದ ತಪಾಸಣೆಗೆ ಒಳಪಡಿಸುತ್ತಿದೆ.
 
ಮಂಗಳವಾರದಂದು ಕೋವಿಡ್ ಚಿಕಿತ್ಸೆಗೆ ಸಿದ್ಧತೆ ಬಗ್ಗೆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಕೋವಿಡ್ ಅಣಕು ಕಾರ್ಯಾಚರಣೆ ನಡೆಸಲಾಗಿದೆ. 
 

SCROLL FOR NEXT