ದೇಶ

ಪಿಎಫ್‌ಐ ಸಂಚು ಪ್ರಕರಣ: ಕೇರಳದ 56 ಸ್ಥಳಗಳಲ್ಲಿ ಎನ್ಐಎ ಏಕಾಏಕಿ ದಾಳಿ

Sumana Upadhyaya

ನವದೆಹಲಿ: ರಾಷ್ಟ್ರೀಯ ತನಿಖಾ ದಳ(NIA) ಕೇರಳದ 56 ಕಡೆಗಳಲ್ಲಿ ಏಕಾಏಕಿ ದಾಳಿ ನಡೆಸಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಪಿತೂರಿ ಕೇಸಿಗೆ ಸಂಬಂಧಪಟ್ಟಂತೆ ಈ ದಾಳಿ ನಡೆದಿದೆ. ದಾಳಿಗೆ ರಾಜ್ಯ ಪೊಲೀಸರ ನೆರವು ಪಡೆದಿದ್ದಾರೆ. 

ಪಿಎಫ್ಐ ಕೇಡರ್ ಗಳ ಜೊತೆ ಸಂಪರ್ಕ ಹೊಂದಿರುವ ಶಂಕೆಯನ್ನು ಹೊಂದಿರುವ ಹಲವು ಕಚೇರಿಗಳು, ಮನೆಗಳ ಮೇಲೆ ಶೋಧ ಕಾರ್ಯ ನಡೆಯುತ್ತಿದೆ. ಪಿಎಫ್ಐ ಸಂಘಟನೆಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಕಳೆದ ಸೆಪ್ಟೆಂಬರ್ ನಲ್ಲಿ ನಿಷೇಧಿಸಿದೆ. ಪಿಎಫ್ಐ ಸಂಘಟನೆ ಮತ್ತು ಅದರ ಸಹವರ್ತಿ ಸಂಸ್ಥೆ, ಸಂಘಟನೆಗಳನ್ನು ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆ 1967ರಡಿಯಲ್ಲಿ 5 ವರ್ಷಗಳ ಕಾಲ ನಿಷೇಧಿಸಲಾಗಿದೆ.

ಎನ್‌ಐಎ ವಿಶೇಷ ತಂಡವು ರಾಜ್ಯಾದ್ಯಂತ ಹಲವು ಪಿಎಫ್‌ಐ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿದೆ. ಎರ್ನಾಕುಲಂ, ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಪಾಲಕ್ಕಾಡ್, ಅಲಪ್ಪುಳ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ವ್ಯಾಪಿಸಿರುವ 56 ಸ್ಥಳಗಳಲ್ಲಿ ಕಳೆದ ರಾತ್ರಿಯಿಂದ ದಾಳಿ ಆರಂಭವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಿಷೇಧದ ಹೊರತಾಗಿಯೂ ಕೆಲವು ನಾಯಕರು ಪಿಎಫ್‌ಐನ ಕಾರ್ಯಚಟುವಟಿಕೆಯನ್ನು ಇನ್ನೂ ಸಕ್ರಿಯವಾಗಿ ಸಂಘಟಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ದಾಳಿಗಳನ್ನು ನಡೆಸಲಾಯಿತು. ಈ ಹಿಂದೆ PFIನ ಸಕ್ರಿಯ ಕಾರ್ಯಕರ್ತ ನಾಯಕರ ಆವರಣದ ಮೇಲೆ ದಾಳಿಗಳು ನಿರ್ದಿಷ್ಟವಾಗಿ ಕೇಂದ್ರೀಕೃತವಾಗಿವೆ. ನಿಷೇಧದ ನಂತರ ಹಲವಾರು ಪಿಎಫ್‌ಐ ನಾಯಕರ ಚಟುವಟಿಕೆಗಳನ್ನು ಎನ್‌ಐಎ ಪತ್ತೆಹಚ್ಚುತ್ತಿದೆ ಮತ್ತು ಅವರಲ್ಲಿ ಅನೇಕರು ಎರ್ನಾಕುಲಂ, ಅಲಪ್ಪುಳ, ಮಲಪ್ಪುರ ಮತ್ತು ತಿರುವನಂತಪುರಂನ ವಿವಿಧ ಸ್ಥಳಗಳಲ್ಲಿ ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾಳಿಯ ಭಾಗವಾಗಿ, ಎನ್‌ಐಎ ತಂಡವು ಹಣ ವರ್ಗಾವಣೆಯನ್ನು ಪತ್ತೆಹಚ್ಚಲು ಕೆಲವು ಶಂಕಿತರ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಸಂಗ್ರಹಿಸುತ್ತಿದೆ.

SCROLL FOR NEXT