ದೇಶ

ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಭದ್ರತೆ ಹೆಚ್ಚಿಸಲು ಒಪ್ಪಿದ ದೆಹಲಿ ಪೊಲೀಸರು

Lingaraj Badiger

ನವದೆಹಲಿ: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಭದ್ರತೆಯನ್ನು ಹೆಚ್ಚಿಸಲು ದೆಹಲಿ ಪೊಲೀಸರು ಶುಕ್ರವಾರ ಒಪ್ಪಿಗೆ ನೀಡಿದ್ದಾರೆ.

ಈ ಇಂದು ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದರು. ದೆಹಲಿ ಪೊಲೀಸ್ ಅಧಿಕಾರಿಗಳೊಂದಿಗೆ ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕಾಂಗ್ರೆಸ್ ದೆಹಲಿ ರಾಜ್ಯಾಧ್ಯಕ್ಷ ಅನಿಲ್ ಚೌಧರಿ ಮತ್ತು ರಾಹುಲ್ ಗಾಂಧಿ ಅವರ ಇತರ ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾಂಗ್ರೆಸ್ ಪ್ರಕಾರ, ಈಗ ದೆಹಲಿ ಪೊಲೀಸರ ವಿಶೇಷ ದಳ, ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿಯ ಸುತ್ತಲೂ ಓಡಲಿದೆ. ಇದರಿಂದ ಅವರ ಸುತ್ತ ಯಾವುದೇ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಭಾರತ್ ಜೋಡೋ ಯಾತ್ರೆಯ ವೇಳೆ 'ಕಳಪೆ ಭದ್ರತಾ ವ್ಯವಸ್ಥೆ' ಕುರಿತು ಕಾಂಗ್ರೆಸ್ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ನಂತರ ಪೊಲೀಸರ ಈ ಕ್ರಮ ಹೊರಬಿದ್ದಿದೆ. ಕಳಪೆ ಭದ್ರತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸೋಹ್ನಾದಲ್ಲಿ ಹರಿಯಾಣ ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ಸಹ ದಾಖಲಿಸಿದೆ.

ಕಾಂಗ್ರೆಸ್ ದೂರಿನ ನಂತರ, ದೆಹಲಿ ಪೊಲೀಸರು ಇದೀಗ ರಾಹುಲ್ ಗಾಂಧಿಯ ಭಧ್ರತೆ ಹೆಚ್ಚಿಸಲಾಗುವುದು ಮತ್ತು ಅವರ ಸುತ್ತಲೂ ಬಲವಾದ ಹಗ್ಗದ ಭದ್ರತಾ ಕವಚವನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

SCROLL FOR NEXT