ದೇಶ

ಬಜೆಟ್ ಅಧಿವೇಶನದ ಉತ್ತರಾರ್ಧ ಹೊಸ ಸಂಸತ್ ಭವನದಲ್ಲಿ...

Srinivas Rao BV

ನವದೆಹಲಿ: ಮಾರ್ಚ್ ತಿಂಗಳಲ್ಲಿ ಹೊಸ ಸಂಸತ್ ಭವನ ಉದ್ಘಾಟನೆಯಾಗಲಿದ್ದು, ಬಜೆಟ್ ಅಧಿವೇಶನದ ಉತ್ತರಾರ್ಧ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ.
 
ಹೊಸ ಸಂಸತ್ ಭವನದ ಕಾಮಗಾರಿ ಚುರುಕಿನಿಂದ ಸಾಗುತ್ತಿದ್ದು, ಫೆಬ್ರವರಿ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನದ ಪೂರ್ವಾರ್ಧ ಜ.30 ಅಥವಾ 31 ರಂದು ಪ್ರಾರಂಭವಾಗಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಬಜೆಟ್ ಫೆ.1 ರಂದು ಮಂಡನೆಯಾಗಲಿದ್ದು, ಮೊದಲಾರ್ಧ ಫೆ.8 ಅಥವಾ 9 ರಂದು ಪೂರ್ಣಗೊಳ್ಳುತ್ತದೆ. ದ್ವಿತೀಯಾರ್ಧ ಮಾರ್ಚ್ ನಲ್ಲಿ ಆರಂಭವಾಗಿ ಮೇ ಮೊದಲ ವಾರದವರೆಗೂ ಮುಂದುವರೆಯಲಿದೆ.

ದೇಶದ ಶಕ್ತಿಕೇಂದ್ರ ಸೆಂಟ್ರಲ್ ವಿಸ್ಟಾದ ಭಾಗವಾಗಿ ಹೊಸ ಸಂಸತ್ ನ್ನು ನಿರ್ಮಿಸಲಾಗುತ್ತಿದೆ. ಹೊಸ ಸಂಸತ್ ಭವನಕ್ಕೆ 2020 ರ ಡಿಸೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.
 
ಹೊಸ ಸಂಸತ್ ಭವನವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಿಸುತ್ತಿದ್ದು, ಭಾರತದ ಪ್ರಜಾಪ್ರಭುತ್ವದ ಪರಂಪರೆಯನ್ನು ಪ್ರದರ್ಶಿಸುವ ಭವ್ಯ ಸಂವಿಧಾನ ಹಾಲ್, ಗ್ರಂಥಾಲಯ, ಹಲವು ಸಮಿತಿಗಳ ಕೊಠಡಿಗಳು ಇರಲಿವೆ.

SCROLL FOR NEXT