ಸಾಂದರ್ಭಿಕ ಚಿತ್ರ 
ದೇಶ

ಉಗ್ರ ಪೀಡಿತ ಕಾಶ್ಮೀರದಲ್ಲಿ ಸಿಆರ್ ಪಿಎಫ್ ಮಹಿಳಾ ಸಿಬ್ಬಂದಿ ಕೈಯಲ್ಲಿ ಶಸ್ತ್ರಾಸ್ತ್ರ: ಯುದ್ಧ ಕಾರ್ಯಾಚರಣೆಯಲ್ಲಿ ಭಾಗಿ

ಉಗ್ರಗಾಮಿ ಪೀಡಿತ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಮೊದಲ ಬಾರಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಡ್ರೋನ್‌ಗಳ ನಿರ್ವಹಣೆಯಲ್ಲಿ ತರಬೇತಿ ಪಡೆದ ಮಹಿಳಾ ಸಿಬ್ಬಂದಿಯನ್ನು ಕಾರ್ಯಾಚರಣೆಯ ಕರ್ತವ್ಯಕ್ಕೆ ನಿಯೋಜಿಸಲಿದೆ.

ಶ್ರೀನಗರ: ಉಗ್ರಗಾಮಿ ಪೀಡಿತ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಮೊದಲ ಬಾರಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಡ್ರೋನ್‌ಗಳ ನಿರ್ವಹಣೆಯಲ್ಲಿ ತರಬೇತಿ ಪಡೆದ ಮಹಿಳಾ ಸಿಬ್ಬಂದಿಯನ್ನು ಕಾರ್ಯಾಚರಣೆಯ ಕರ್ತವ್ಯಕ್ಕೆ ನಿಯೋಜಿಸಲಿದೆ. ನಿಯೋಜನೆಯು 2023ರ ಮಾರ್ಚ್‌ನಲ್ಲಿ ನಡೆಯಲಿದೆ. ಕಣಿವೆಯಲ್ಲಿ ಉಗ್ರಗಾಮಿಗಳೊಂದಿಗೆ ನೇರ ಹೋರಾಟಕ್ಕಾಗಿ ಯಾವುದೇ ಭದ್ರತಾ ಏಜೆನ್ಸಿಗಳ ಮಹಿಳಾ ಪಡೆಯ ಮೊದಲ ಸೇರ್ಪಡೆಯಾಗಿದೆ.

ಪುರುಷ ಪ್ರಾಬಲ್ಯದ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಮಹಿಳೆಯರು ಅನಾನುಕೂಲತೆಯನ್ನು ಅನುಭವಿಸುತ್ತಿರುವುದನ್ನು ಗಮನಿಸಿದ ಸಿಆರ್‌ಪಿಎಫ್ ಸುತ್ತುವರೆದು ಕಾರ್ಯಾಚರಣೆ ನಡೆಸುವ ಮತ್ತು ಶೋಧ ಕಾರ್ಯಾಚರಣೆಯ ಸಮಯದಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲು ಸಿಆರ್‌ಪಿಎಫ್ ಯೋಜಿಸುತ್ತಿದೆ ಎಂದು ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ (ಶ್ರೀನಗರ ವಲಯ) ಚಾರು ಸಿನ್ಹಾ ಟಿಎನ್‌ಐಇಗೆ ತಿಳಿಸಿದ್ದಾರೆ. "ಮಹಿಳೆಯರ ಸೌಕರ್ಯಕ್ಕಾಗಿ, ನಾವು ಶೋಧ ಕಾರ್ಯಾಚರಣೆಯ ಸಮಯದಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಿದ್ದೇವೆ. ಎಂದು ಅವರು ಹೇಳಿದರು. 

ಪ್ರಸ್ತುತ, ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಶ್ರೀನಗರ ವಿಮಾನ ನಿಲ್ದಾಣ, ಸಿವಿಲ್ ಸೆಕ್ರೆಟರಿಯೇಟ್ ಮತ್ತು ಇತರ ಸರ್ಕಾರಿ ಸ್ಥಾಪನೆಗಳಲ್ಲಿ ಮಹಿಳೆಯರನ್ನು ಪರೀಕ್ಷಿಸಲು ನಿಯೋಜಿಸಲಾಗಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ಕಣಿವೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲು ನಾವು ಉದ್ದೇಶಿಸಿದ್ದೇವೆ ಎಂದು ಸಿನ್ಹಾ ಹೇಳಿದ್ದಾರೆ.

ಮಹಿಳಾ ಸಿಬ್ಬಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಡ್ರೋನ್‌ಗಳ ಬಳಕೆಯಲ್ಲಿ ಕಣಿವೆಯಲ್ಲಿ ಒಂದೂವರೆ ತಿಂಗಳ ತರಬೇತಿ ನೀಡಲಾಗುವುದು. “ಹೆಚ್ಚುವರಿ ತರಬೇತಿ ಪಡೆದ ನಂತರ, ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿಯನ್ನು ತಮ್ಮ ಪುರುಷ ಸಿಬ್ಬಂದಿಗೆ ಸಮನಾಗಿ ಉಗ್ರಗಾಮಿಗಳ ವಿರುದ್ಧ ಹೋರಾಡಲು ಪ್ರತಿ-ಉಗ್ರತಾ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗುವುದು. ಪುರುಷ ಕಾನ್‌ಸ್ಟೇಬಲ್ ಗಳು ಮಾಡುವ ಎಲ್ಲ ಕೆಲಸವನ್ನೂ ಮಹಿಳಾ ಸಿಬ್ಬಂದಿ ಮಾಡಲಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ.

ಮಹಿಳಾ ಸಿಬ್ಬಂದಿಯ ತರಬೇತಿಯು ಪುರುಷರಂತೆಯೇ ಇರುತ್ತದೆ. ಪುರುಷ ಸಿಬ್ಬಂದಿಯಂತೆ ಅದೇ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

IPL 2026: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ; RR vs RCB ಪಂದ್ಯದ 'ಭ್ರಷ್ಟಾಚಾರ ವಿರೋಧಿ' ಶಿಷ್ಟಾಚಾರ ಉಲ್ಲಂಘನೆಗೆ BCCI ಖಡಕ್ ಪ್ರತಿಕ್ರಿಯೆ

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

SCROLL FOR NEXT