ದೇಶ

ನಮ್ಮ ಸರ್ಕಾರ ಬೀಳಿಸಿ ನೋಡಿ, ನಿಮ್ಮನ್ನೇ ಅಧಿಕಾರದಿಂದ ಕೆಳಗಿಳಿಸುತ್ತೇವೆ: ಪ್ರಧಾನಿ ಮೋದಿಗೆ ಕೆಸಿಆರ್ ಸವಾಲು

Nagaraja AB

ಹೈದ್ರಾಬಾದ್: ಚುನಾವಣೆಗೂ ಮುನ್ನ ಸುಳ್ಳಿನ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಯೋಜನಕ್ಕೆ ಬಾರದ ಮಾತುಗಳನ್ನಾಡುತ್ತಿದ್ದಾರೆ ಎಂದು ಟಿಆರ್ ಎಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿರುವ ಮೋದಿ ಸರ್ಕಾರವನ್ನು ಕೇಂದ್ರದಿಂದ ಕೆಳಗಿಳಿಸಲಾಗುವುದು ಎಂದು ಚಂದ್ರಶೇಖರ್ ರಾವ್ ಬಿಜೆಪಿಗೆ ಬೆದರಿಕೆ ಹಾಕಿದರು.

ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಪರಿಚಯಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಶೇಖರ್ ರಾವ್, ಅನೇಕ ಕೇಂದ್ರ ಸಚಿವರು ಪ್ರಸ್ತುತ ಹೈದರಾಬಾದಿನಲ್ಲಿದ್ದು, ಮಹಾರಾಷ್ಟ್ರದಲ್ಲಿ ಆದಂತೆ ತೆಲಂಗಾಣದಲ್ಲೂ ಸರ್ಕಾರ ಕೆಡವಲು ನಿರ್ಧರಿಸಿದ್ದಾರೆ. ಅದು ಓಕೆ. ಅದಕ್ಕಾಗಿಯೇ ನಾವು ಕಾಯುತ್ತಿದ್ದೇವೆ. ಆದ್ದರಿಂದ ನಾವು ಮುಕ್ತವಾಗಿದ್ದೇವೆ. ತದನಂತರ ದೆಹಲಿಯಲ್ಲಿ ನಾವು ಮೋದಿ ಸರ್ಕಾರವನ್ನು ಕೆಳಗಿಳಿಸುತ್ತೇವೆ ಎಂದು ಹೇಳಿದರು.

ಪ್ರತಿದಿನ ಪ್ರಜಾಪ್ರಭುತ್ವ ಹತ್ಯೆಯಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆಯ ನಾವು 100 ಶಾಸಕರಿದ್ದು, ಮಿತ್ರ ಪಕ್ಷ ಎಐಎಂಐಎಂನ ಏಳು ಶಾಸಕರಿದ್ದಾರೆ. ನಮ್ಮ ಸರ್ಕಾರವನ್ನು ಪತನಗೊಳಿಸುವುದಾಗಿ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ ಎಂದು ರಾವ್ ಉಲ್ಲೇಖಿಸಿದರು.

ರೈತರ ಆದಾಯ ದುಪ್ಪಟ್ಟುಗೊಳಿಸುವಲ್ಲಿ ವಿಫಲ ಸೇರಿದಂತೆ ಹಲವು ಪ್ರಶ್ನೆಗಳನ್ನು ಮೋದಿಗೆ ಕೇಳಿದ ರಾವ್, ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತರುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಕಪ್ಪು ಹಣ ಏಲ್ಲಿದೆ ಎಂದು ಪ್ರಶ್ನಿಸಿದರು. ಪಕ್ಷದ ಸಂಸದರು ಹಾಗೂ ಶಾಸಕರಿಗೆ ಯಶವಂತ್ ಸಿನ್ಹಾ ಅವರನ್ನು ಪರಿಚಯಿಸುವ ಮೂಲಕ ಅವರಿಗೆ ಮತ ನೀಡುವಂತೆ ಕೋರಿದರು. 

"ಮೋದಿ ಅವರು ತಮ್ಮನ್ನು ಬ್ರಹ್ಮ ಮತ್ತು ಶಾಶ್ವತ ಎಂದು ಭಾವಿಸಿದ್ದಾರೆ. ಮೋದಿ ಅವರು ಈ ದೇಶದ 15 ನೇ ಪ್ರಧಾನಿ. ಪ್ರಜಾಪ್ರಭುತ್ವದಲ್ಲಿ ಯಾರೂ ಶಾಶ್ವತರಲ್ಲ. ಬದಲಾವಣೆ ಅಸಾಧ್ಯವಲ್ಲ. ದೇಶದಲ್ಲಿ ಹಲವಾರು ಪ್ರಧಾನಿಗಳು ಬದಲಾಗಿದ್ದಾರೆ" ಎಂದು ರಾವ್ ಹೇಳಿದರು.

SCROLL FOR NEXT