ಉತ್ತರ ಪ್ರದೇಶದ ಸ್ಥಳೀಯ ಪೊಲೀಸರಿಗೆ ಚತ್ತೀಸ್ ಗಢ ಪೊಲೀಸರು ರೋಹಿತ್ ರಂಜನ್ ಬಂಧನಕ್ಕೆ ಸಂಬಂಧಿಸಿದಂತೆ ನೊಟೀಸ್ ನೀಡುತ್ತಿರುವುದು 
ದೇಶ

ರಾಹುಲ್ ಗಾಂಧಿ ಹೇಳಿಕೆಯ ತಿರುಚಿದ ವಿಡಿಯೋ: ಹಲವು ರಾಜ್ಯಗಳಲ್ಲಿ ಎಫ್ಐಆರ್; 'ಸುಪ್ರೀಂ' ಮೆಟ್ಟಿಲೇರಿದ ಜೀ ನ್ಯೂಸ್ ಪತ್ರಕರ್ತ ರೋಹಿತ್ ರಂಜನ್

ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಹರಡಿದ್ದ ಆರೋಪದಡಿ ಜೀ ನ್ಯೂಸ್ ನ ರೋಹಿತ್ ರಂಜನ್ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಎಫ್ಐಆರ್ ಗಳು ದಾಖಲಾಗಿದ್ದು,  ರೋಹಿತ್ ರಂಜನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ನವದೆಹಲಿ: ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಹರಡಿದ್ದ ಆರೋಪದಡಿ ಜೀ ನ್ಯೂಸ್ ನ ರೋಹಿತ್ ರಂಜನ್ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಎಫ್ಐಆರ್ ಗಳು ದಾಖಲಾಗಿದ್ದು, ರೋಹಿತ್ ರಂಜನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
 
ರೋಹಿತ್ ರಂಜನ್ ತಮ್ಮ ವಿರುದ್ಧ ಹಲವು ಕಡೆಗಳಲ್ಲಿ ಎಫ್ಐಆರ್ ದಾಖಲಾಗಿರುವುದರಿಂದ (coercive action) ರಕ್ಷಣೆ ನೀಡಬೇಕು ಎಂದು ಮನವಿ ಮಾಡಿ ತಕ್ಷಣವೇ ಪ್ರಕರಣದ ವಿಚಾರಣೆಯನ್ನು ಕೋರಿದ್ದರು. ರಜೆ ಪೀಠದ ನ್ಯಾ. ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಗುರುವಾರದಂದು ವಿಚಾರಣೆಗೆ ಪಟ್ಟಿ ಮಾಡಿತ್ತು.

"ಇದನ್ನು ನಮಗೆ ನೀಡಲಾಗಿಲ್ಲ. ಈ ಪ್ರಕರಣದ ವಿಚಾರಣೆಯ ಹಂಚಿಕೆಯನ್ನು ಮುಖ್ಯನ್ಯಾಯಾಧೀಶರು ಮಾಡಬೇಕಾಗುತ್ತದೆ ಎಂದು ನ್ಯಾ.ಜೆ.ಕೆ ಮಹೇಶ್ವರಿ ಅವರೂ ಇದ್ದ ಪೀಠ ಹೇಳಿತ್ತು". 

ಸುದ್ದಿ ವಾಚಕ ರೋಹಿತ್ ರಂಜನ್ ಪರವಾಗಿ ಹಾಜರಾದ ಹಿರಿಯ ಅಡ್ವೊಕೇಟ್ ಸಿದ್ಧಾರ್ಥ್ ಲೂಥ್ರಾ, ಈ ಹಿಂದೆ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಲಾಗಿತ್ತು. ಆದರೆ ಅದು ಆಗಿಲ್ಲ. ಆದ್ದರಿಂದ ಶುಕ್ರವಾರದಂದು ಯಾವುದಾದರೂ ಪೀಠಕ್ಕೆ ಈ ಪ್ರಕರಣದ ವಿಚಾರಣೆಯನ್ನು ವಹಿಸಬೇಕೆಂದು ಮನವಿ ಮಾಡಿದ್ದಾರೆ.

ರೋಹಿತ್ ರಂಜನ್ ಪರ ವಕೀಲರ ಮನವಿಗೆ ಸ್ಪಂದಿಸಿದ ನ್ಯಾಯಾಲಯ, ನೋಡೋಣ, ಪ್ರಕರಣದ ಪೇಪರ್ ಗಳು ಸಿಜೆಐ ಬಳಿ ಇದೆ. ನಾಳೆ ಪ್ರಕರಣದ ವಿಚಾರಣೆ ನಿಗದಿಪಡಿಸುವುದು ಸಿಜೆಐ ಅವರ ಕ್ಲಿಯರೆನ್ಸ್ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪೀಠ ಹೇಳಿದೆ.

ರಂಜನ್ ಕ್ಷಮೆ ಕೋರಿದ್ದು, ಸುದ್ದಿ ಕಾರ್ಯಕ್ರಮವನ್ನು ಹಿಂಪಡೆಯಲಾಗಿತ್ತು. ರೋಹಿತ್ ರಂಜನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ನೋಯ್ಡಾದಲ್ಲಿ ಬಂಧಿಸಿದ್ದರು. ರೋಹಿತ್ ರಂಜನ್ ಜಾಮೀನು ಪಡೆದಿದು ಹೊರಬಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ತಪ್ಪು ಮಾಡಿ ಅದಕ್ಕಾಗಿ ಕ್ಷಮೆಯನ್ನೂ ಕೇಳಿದ್ದಾರೆ, ಸುದ್ದಿಯನ್ನು ಹಿಂಪಡೆಯಲಾಗಿದೆ. ಆದರೆ ಈಗ ಚತ್ತೀಸ್ ಗಢದ ಪೊಲೀಸರು ಆತನನ್ನು ಬಂಧಿಸಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಇದು ತುರ್ತಾಗಿ ವಿಚಾರಣೆ ನಡೆಯಬೇಕಿರುವ ಪ್ರಕರಣವಾಗಿದೆ. ಇಲ್ಲವಾದಲ್ಲಿ ಆತನನ್ನು ಪದೇ ಪದೇ ಬಂಧನಕ್ಕೊಳಪಡಿಸುವ ಸಾಧ್ಯತೆ ಇದೆ ಎಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT