ದೇಶ

ಎಲ್ಗಾರ್ ಪರಿಷತ್ ಪ್ರಕರಣ: 5 ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಎನ್ಐಎ ಕೋರ್ಟ್

Srinivas Rao BV

ಮುಂಬೈ: ಎಲ್ಗಾರ್ ಪರಿಷತ್-ಮಾವೋವಾದಿಗಳ ಸಂಪರ್ಕವಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಶೋಮಾ ಸೇನ್ ಹಾಗೂ ಇನ್ನೂ ನಾಲ್ವರ ಜಾಮೀನು ಅರ್ಜಿಯನ್ನು ಮುಂಬೈ ನ ವಿಶೇಷ ಎನ್ಐಎ ನ್ಯಾಯಾಲಯ ತಿರಸ್ಕರಿಸಿದೆ. 

2018 ರಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗಾಗಿ ಈ ವರೆಗೂ ಯಾವುದೇ ಪ್ರಯತ್ನ ಮಾಡಿಲ್ಲ. ಇಷ್ಟು ದೀರ್ಘಾವಧಿಯಾದರೂ ಅರ್ಜಿ ವಿಚಾರಣೆ ಮುಂದುವರಿಸದೇ ಇರುವುದಕ್ಕೆ ಯಾವುದೇ ವಿವರಣೆಯನ್ನೂ ನೀಡಿಲ್ಲ, ಅವರ ತಪ್ಪುಗಳಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. 

ವಿಶೇಷ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ನ್ಯಾಯಾಧೀಶರಾದ ರಾಜೇಶ್ ಕಠಾರಿಯಾ ಅವರಿದ್ದ ಪೀಠ, ಶೋಮ ಸೇನ್; ಸುಧೀರ್ ಧಾವಳೆ, ಸಾಮಾಜಿಕ ಜಾರ್ಯಕರ್ತ ರೋನಾ ವಿಲ್ಸನ್ ಅಡ್ವೊಕೇಟ್ ಸುರೇಂದ್ರ ಸುರೇಂದ್ರ ಗದ್ಲಿಂಗ್ ಹಾಗೂ ಮಹೇಶ್ ರೌತ್ ಅವರ ಡೀಫಾಲ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. 

ಡೀಫಾಲ್ಟ್ ಜಾಮಿನು ಕೋರಿ 2018 ರಲ್ಲಿ ಆರೋಪಿಗಳು ಪುಣೆಯ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸುವುದಕ್ಕಾಗಿ ಸೆಷನ್ಸ್ ನ್ಯಾಯಾಲಯ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸಿರುವುದು ಅಕ್ರಮ ಆದ್ದರಿಂದ ತಾವು ಡೀಫಾಲ್ಟ್ ಜಾಮೀನು ಪಡೆಯಲು ಅರ್ಹರು ಎಂದು ಆರೋಪಿಗಳು ವಾದಿಸಿದ್ದರು. 

SCROLL FOR NEXT