ದೇಶ

ಮಹಾರಾಷ್ಟ್ರ: ನನ್ನ ಬೆಂಗಾವಲಿಗೆ ಪೊಲೀಸ್ ಬಂದೋಬಸ್ತ್ ಅಗತ್ಯವಿಲ್ಲ ಎಂದ ಸಿಎಂ ಏಕನಾಥ್ ಶಿಂಧೆ

Nagaraja AB

ಮುಂಬೈ: ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ತನ್ನ ಬೆಂಗಾವಲಿಗೆ ಪೊಲೀಸರು ವಿಶೇಷ ಬಂದೋಬಸ್ತ್ ಒದಗಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕ ರಜನಿಶ್ ಸೇಥ್ ಮತ್ತು ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫಾಂಸಲ್ಕರ್ ಜೊತೆಗೆ ಸಮಾಲೋಚನೆ ನಡೆಸಿದ ನಂತರ ಶಿಂಧೆ ಈ ನಿರ್ದೇಶನ ನೀಡಿದ್ದಾರೆ.

ಬಂದೋಬಸ್ತ್ ಒದಗಿಸುವುದು ತ್ರಾಸದಾಯಕವಾಗಿದ್ದು, ಸಾಮಾನ್ಯ ಜನರಿಗೆ ವಿಳಂಬವಾಗುವುದರಿಂದ ತನ್ನ ಬೆಂಗಾವಲು ವಾಹನಕ್ಕೆ ಪೊಲೀಸರು ಬಂದೋಬಸ್ತ್ ಒದಗಿಸುವುದು ಬೇಡ ಎಂದು ಶಿಂಧೆ ನಿರ್ದೇಶಿಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಸರ್ಕಾರ ಸಾಮಾನ್ಯ ಜನರ ಸರ್ಕಾರವಾಗಿದೆ. ಹಾಗಾಗಿ ವಿಐಪಿ ಎಂದು ಆದ್ಯತೆ ನೀಡಬಾರದು, ವಿಶೇಷ ಶಿಷ್ಟಾಚಾರದಿಂದ ಸಂಚಾರ ದಟ್ಟಣೆ ಉಂಟಾಗಲಿದ್ದು, ನಾಗರಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ. ಪೊಲೀಸ್ ಪಡೆಗೂ ಕಷ್ಟಕರವಾಗಲಿದೆ ಎಂದು ಅವರು ಶಿಂಧೆ ಹೇಳಿದ್ದಾರೆ.

SCROLL FOR NEXT