ರೇಜರ್ ಪೇ ಮತ್ತು ಆಲ್ಟ್ ನ್ಯೂಸ್ ಮುಖ್ಯಸ್ಥ ಜುಬೇರ್ 
ದೇಶ

ದೇಶೀಯ ಪಾವತಿ ಸ್ವೀಕರಿಸಲಷ್ಟೇ ಆಲ್ಟ್‌ ನ್ಯೂಸ್‌ಗೆ ಅನುಮತಿ ನೀಡಲಾಗಿತ್ತು: ರೇಜರ್‌ಪೇ ಸ್ಪಷ್ಟನೆ

ವಿವಾದಿತ ಟ್ವೀಟ್ ಗೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ ‘ಆಲ್ಟ್‌ ನ್ಯೂಸ್‌’ ಮುಖ್ಯಸ್ಥ ಮಹಮದ್ ಜುಬೈರ್ ಅವರಿಗೆ ದೇಶೀಯ ಪಾವತಿ ಸ್ವೀಕಾರಕ್ಕಷ್ಟೇ ಅನುಮತಿ ನೀಡಲಾಗಿತ್ತು ಎಂದು  ರೇಜರ್‌ಪೇ ಸ್ಪಷ್ಟನೆ ನೀಡಿದೆ.

ನವದೆಹಲಿ: ವಿವಾದಿತ ಟ್ವೀಟ್ ಗೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ ‘ಆಲ್ಟ್‌ ನ್ಯೂಸ್‌’ ಮುಖ್ಯಸ್ಥ ಮಹಮದ್ ಜುಬೈರ್ ಅವರಿಗೆ ದೇಶೀಯ ಪಾವತಿ ಸ್ವೀಕಾರಕ್ಕಷ್ಟೇ ಅನುಮತಿ ನೀಡಲಾಗಿತ್ತು ಎಂದು  ರೇಜರ್‌ಪೇ ಸ್ಪಷ್ಟನೆ ನೀಡಿದೆ.

ಆಲ್ಟ್‌ ನ್ಯೂಸ್‌ ಸ್ವೀಕರಿಸಿದ ದೇಣಿಗೆಗೆ ಸಂಬಂಧಿಸಿದಂತೆ ಹಣಕಾಸು ತಂತ್ರಜ್ಞಾನ ಸೇವಾ ಸಂಸ್ಥೆ, ರೇಜರ್‌ಪೇ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅಧಿಕಾರಿ ಹರ್ಷಿಲ್ ಮಾಥುರ್ ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿದೇಶದಿಂದ ದೇಣಿಗೆ ಪಡೆದಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪ ಹೊರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಥುರ್, ‘ಕೇವಲ ದೇಶೀಯ ಪಾವತಿಗಳನ್ನು ಸ್ವೀಕರಿಸಲಷ್ಟೇ ‘ಆಲ್ಟ್‌ ನ್ಯೂಸ್‌’ಗೆ ಅನುಮತಿಸಲಾಗಿತ್ತು. ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ–2010ರ ಅನುಮೋದನೆ ಇಲ್ಲದೇ ವಿದೇಶಿ ವಹಿವಾಟುಗಳಿಗೆ ಅವಕಾಶ ನೀಡಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಅಂತೆಯೇ ‘ಆಲ್ಟ್‌ ನ್ಯೂಸ್‌’ನ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗಿದ್ದು, ನಿರ್ದಿಷ್ಟ ತನಿಖೆಗಾಗಿ ನಿರ್ದಿಷ್ಟ ದತ್ತಾಂಶವನ್ನು ಮಾತ್ರ ತನಿಖಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮಾಥುರ್‌ ತಿಳಿಸಿದ್ದಾರೆ.

ತನಗೆ ದೇಣಿಗೆ ನೀಡಿದವರ ಬಗೆಗಿನ ಮಾಹಿತಿಯನ್ನು ‘ರೇಜರ್‌ಪೇ’ ಪೊಲೀಸರೊಂದಿಗೆ ಹಂಚಿಕೊಂಡಿದೆ ಎಂದು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್ ‘ಆಲ್ಟ್ ನ್ಯೂಸ್’ ಆರೋಪಿಸಿತ್ತು. ಇದಕ್ಕೂ ಪ್ರತಿಕ್ರಿಯೆ ನೀಡಿರುವ ಮಾಥುರ್, ‘ದಾನಿಗಳ ಪ್ಯಾನ್, ವಿಳಾಸ, ಪಿನ್ ಕೋಡ್ ಇತ್ಯಾದಿಗಳನ್ನು ಹಂಚಿಕೊಂಡಿಲ್ಲ. ಇದು ತನಿಖೆಯ ವ್ಯಾಪ್ತಿಯಿಂದ ಹೊರಗಿನ ಅಂಶಗಳು ಎಂದು ನಾವು ನಂಬಿದ್ದೇವೆ’ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT