ವಾಯುಪಡೆ ಹೆಲಿಕಾಫ್ಟರ್ (ಸಂಗ್ರಹ ಚಿತ್ರ) 
ದೇಶ

ಅಮರನಾಥ ಮೇಘಸ್ಫೋಟ ದುರಂತ: ಐಎಎಫ್ ನಿಂದ 8 ಹೆಲಿಕಾಫ್ಟರ್ ಗಳ ನಿಯೋಜನೆ 

ಅಮರನಾಥ ಮೇಘಸ್ಫೋಟ ದುರಂತದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಾಚರಣೆಗಾಗಿ 8 ಹೆಲಿಕಾಫ್ಟರ್ ಗಳನ್ನು ನಿಯೋಜಿಸಿದೆ. 

ಶ್ರೀನಗರ: ಅಮರನಾಥ ಮೇಘಸ್ಫೋಟ ದುರಂತದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಾಚರಣೆಗಾಗಿ 8 ಹೆಲಿಕಾಫ್ಟರ್ ಗಳನ್ನು ನಿಯೋಜಿಸಿದೆ. ಅಮರನಾಥ ಗುಹೆ ದೇವಾಲಯದ ಬಳಿ ಮಳೆಯ ಕಾರಣದಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.
 
ನಾಲ್ಕು ಎಂಐ-17v5 ಹಾಗೂ ನಾಲ್ಕು ಚೀತಾಲ್ ಹೆಲಿಕಾಫ್ಟರ್ ಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿರುವುದಾಗಿ ಐಎಎಫ್ ಹೇಳಿದೆ. ಗುಹೆ ದೇವಾಲಯವಿರುವ ಪ್ರದೇಶದಿಂದ ಚೀತಾಲ್ ಹೆಲಿಕಾಫ್ಟರ್ ಗಳ ಮೂಲಕ ಐವರು ಎನ್ ಡಿಆರ್ ಎಫ್ ಹಾಗೂ ಸೇನಾ ಸಿಬ್ಬಂದಿಗಳ ಸಹಾಯ, 3.5 ಟನ್ ಗಳ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ದು 45 ಮಂದಿಯನ್ನು ರಕ್ಷಿಸಲಾಗಿದೆ ಎಂದು ಐಎಎಫ್ ವಕ್ತಾರರು ಹೇಳಿದ್ದಾರೆ. 

ಎಂಐ-17v5 ಹೆಲಿಕಾಫ್ಟರ್ ಗಳು 9.5 ಟನ್ ಗಳ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದ್ದು,64 ಮಂದಿಯನ್ನು ರಕ್ಷಿಸಲಾಗಿದ್ದು, 7 ಮಂದಿಯ ಮೃತ ದೇಹವನ್ನು ಇದೇ ಹೆಲಿಕಾಫ್ಟರ್ ಗಳ ಸಹಾಯದಿಂದ ಘಟನಾ ಸ್ಥಳದಿಂದ ಹೊರತರಲಾಗಿದೆ. 32 ಸಾರಿಗೆ ವಿಮಾನಗಳು ಹಾಗೂ ಡಾರ್ನಿಯರ್ ವಿಮಾನವನ್ನೂ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶದಲ್ಲಿ ಎಲ್ಲಾ ಪ್ರಮುಖ ವಾಯುನೆಲೆಗಳಲ್ಲಿ ವಿಮಾನಗಳು ಸನ್ನದ್ಧಗೊಂಡಿವೆ ಎಂದು ವಕ್ತಾರರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT