ದೇಶ

ಗೋವಾ: ವಿಪಕ್ಷ ಕಾಂಗ್ರೆಸ್ ನ 5 ಶಾಸಕರು ಅಜ್ಞಾತ; ಷಡ್ಯಂತ್ರದ ಆರೋಪದಡಿ ವಿಪಕ್ಷ ನಾಯಕ ಮೈಕೆಲ್ ಲೋಬೋ ವಜಾ

Srinivas Rao BV

ಪಣಜಿ: ಗೋವಾದಲ್ಲಿ ವಿಪಕ್ಷ ಕಾಂಗ್ರೆಸ್ ಗೆ ಹೊಸ ತಲೆನೋವು ಪ್ರಾರಂಭವಾಗಿದ್ದು, ತನ್ನ 11 ಶಾಸಕರು ಸಂಪರ್ಕಕ್ಕೆ ಸಿಗದೇ ಅಜ್ಞಾತರಾಗಿದ್ದಾರೆ ಎಂದು ಸ್ವತಃ ಕಾಂಗ್ರೆಸ್ ಪಕ್ಷ ಹೇಳಿದೆ.

ತನ್ನ ಇಬ್ಬರು ಶಾಸಕರು- ಮೈಕೆಲ್ ಲೋಬೋ ( ವಿಪಕ್ಷ ನಾಯಕ) ಹಾಗೂ ದಿಗಂಬರ್ ಕಾಮತ್ (ಮಾಜಿ ಸಿಎಂ) ಇಬ್ಬರೂ ಬಿಜೆಪಿ ಜೊತೆಗೂಡಿ ಪಕ್ಷದ ಶಾಸಕರನ್ನು ಇಬ್ಭಾಗ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಪಕ್ಷ ಲೋಬೋ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ವಜಾಗೊಳಿಸಿದೆ.

ಈ ಮಾಹಿತಿ ಹಾಗೂ ವಿಪಕ್ಷ ನಾಯಕನನ್ನು ವಜಾಗೊಳಿಸುತ್ತಿರುವ ಪಕ್ಷದ ನಿರ್ಧಾರವನ್ನು ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಪ್ರಕಟಿಸಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್ ನ ಕೆಲವು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ, ಊಹಾಪೋಹಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. 3 ವರ್ಷಗಳ ಹಿಂದೆ ಇದೇ ದಿನದಂದು ಕಾಂಗ್ರೆಸ್ ನ 10 ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

"ಕಾಂಗ್ರೆಸ್ ನಲ್ಲಿ ಒಡಕು ಮೂಡಿಸುತ್ತಿದ್ದ ಇಬ್ಬರೂ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

SCROLL FOR NEXT