ದೇಶ

ಕಡಿಮೆ ವೇತನ; ಸಾಮೂಹಿಕ ಅನಾರೋಗ್ಯ ರಜೆ: ಹೈದರಾಬಾದ್, ದೆಹಲಿಗಳಲ್ಲಿ ಇಂಡಿಗೋ ತಂತ್ರಜ್ಞರ ಪ್ರತಿಭಟನೆ

Srinivas Rao BV

ನವದೆಹಲಿ: ಕಡಿಮೆ ವೇತನವನ್ನು ಖಂಡಿಸಿ ಇಂಡಿಗೋ ವಿಮಾನ ಸಂಸ್ಥೆಯ ತಂತ್ರಜ್ಞರು ಪ್ರತಿಭಟನೆಗೆ ಇಳಿದಿದ್ದಾರೆ.

ದೆಹಲಿ ಹಾಗೂ ಹೈದರಾಬಾದ್ ಗಳಲ್ಲಿ ವಿಮಾನ ನಿರ್ವಹಣೆ (maintenance) ತಂತ್ರಜ್ಞರ ಪೈಕಿ ಹಲವರು ಕಳೆದ 2 ದಿನಗಳಿಂದ ಅನಾರೋಗ್ಯ ರಜೆ ಹಾಕಿದ್ದಾರೆ. 

ಕ್ಯಾಬಿನ್ ತಂಡದಲ್ಲಿದ್ದ ಸದಸ್ಯರು ಅನಾರೋಗ್ಯದ ನಿಮಿತ್ತ ರಜೆ ಹಾಕಿದ್ದ ಕಾರಣ ಜು.2 ರಂದು ಇಂಡಿಗೋದ ಹತ್ತಿರ ಹತ್ತಿರ ಶೇ.55 ರಷ್ಟು ದೇಶೀಯ ವಿಮಾನಗಳು ವಿಳಂಬಗೊಂಡಿದ್ದವು. ಮೇಲ್ನೋಟಕ್ಕೆ ಇವರೆಲ್ಲರೂ ಏರ್ ಇಂಡಿಯಾದ ನೇಮಕಾತಿ ಅಭಿಯಾನಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. 

ಕೋವಿಡ್-19 ತೀವ್ರಗೊಂಡಿದ್ದಾಗ ಇಂಡಿಗೋ ಸಂಸ್ಥೆ ತನ್ನ ಬಹುಪಾಲು ಉದ್ಯೋಗಿಗಳಿಗೆ ವೇತನ ಕಡಿತಗೊಳಿಸಿತ್ತು. ಹೊಸ ವಿಮಾನ ಸಂಸ್ಥೆಗಳಾದ ಆಕಾಶ ಏರ್, ಟಾಟಾ ಸಮೂಹದ ಏರ್ ಇಂಡಿಯಾ ಹೊಸದಾಗಿ ನೇಮಕಾತಿಗೆ ಮುಂದಾಗಿದ್ದು, ವೈಮಾನಿಕ ವಲಯದಲ್ಲಿ ಹೊಸ ಬೇಡಿಕೆ, ಬದಲಾವಣೆಗಳಾಗತೊಡಗಿದೆ. ಹಲವು ಉದ್ಯೋಗಿಗಳು ಉತ್ತಮ ಅವಕಾಶಕ್ಕಾಗಿ ಎದುರುನೋಡುತ್ತಿದ್ದಾರೆ.

SCROLL FOR NEXT