ಕುದುರೆ ಮೇಲೆ ಸ್ವಿಗ್ಗಿ ಬ್ಯಾಗ್ ಧರಿಸಿ ಕುಳಿತಿರುವ ವ್ಯಕ್ತಿ 
ದೇಶ

ಕುದುರೆಯ ಮೇಲೆ ಸ್ವಿಗ್ಗಿ ಬ್ಯಾಗ್ ಧರಿಸಿದ್ದ ವ್ಯಕ್ತಿಯ ಗುರುತು ಪತ್ತೆ: ಯಾರವನು ಗೊತ್ತೇ?

ಕುದುರೆ ಮೇಲೆ ಕುಳಿತು ಸ್ವಿಗ್ಗಿ ಡೆಲಿವರಿ ಮಾಡಲು ಹೋಗುತ್ತಿದ್ದ ವೈರಲ್ ವೀಡಿಯೋದಲ್ಲಿದ್ದ ವ್ಯಕ್ತಿ ಯಾರೆಂಬುದು ಕೊನೆಗೂ ಬಹಿರಂಗಗೊಂಡಿದೆ. 

ಮುಂಬೈ: ಕುದುರೆ ಮೇಲೆ ಕುಳಿತು ಸ್ವಿಗ್ಗಿ ಡೆಲಿವರಿ ಮಾಡಲು ಹೋಗುತ್ತಿದ್ದ ವೈರಲ್ ವೀಡಿಯೋದಲ್ಲಿದ್ದ ವ್ಯಕ್ತಿ ಯಾರೆಂಬುದು ಕೊನೆಗೂ ಬಹಿರಂಗಗೊಂಡಿದೆ. 

ವಿಡಿಯೋ ವೈರಲ್ ಆಗಿ, ಆ ವ್ಯಕ್ತಿಯನ್ನು ಗುರುತು ಹಿಡಿದವರಿಗೆ ಸ್ವಿಗ್ಗಿ ಬಹುಮಾನವನ್ನೂ ಘೋಷಣೆ ಮಾಡಿತ್ತು. ಅದರಂತೆ ಹಲವು ಮಂದಿ ವ್ಯಕ್ತಿ ಹಾಗೂ ಕುದುರೆಯ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ಹಲವರು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಆದರೆ ಈ ಸಸ್ಪೆನ್ಸ್ ಗೆ ಕೊನೆಗೂ ಸ್ವಿಗ್ಗಿ ಸಂಸ್ಥೆಯೇ ತೆರೆ ಎಳೆದಿದೆ. 

ಈ ಬಗ್ಗೆ ಟ್ವಿಟರ್ ನಲ್ಲೇ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿರುವ ಸ್ವಿಗ್ಗಿ, ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದು, ಸ್ವಿಗ್ಗಿ ಡೆಲಿವರಿ ಬ್ಯಾಗ್ ಧರಿಸಿ ಕುದುರೆ ಮೇಲಿದ್ದ ವ್ಯಕ್ತಿ ಯಾರೆಂಬುದನ್ನು ಹೇಳಿದೆ. 

ಸ್ವಿಗ್ಗಿ ನೀಡಿರುವ ಮಾಹಿತಿಯ ಪ್ರಕಾರ, ಕುದುರೆ ಮೇಲಿದ್ದ ವ್ಯಕ್ತಿ 17 ವರ್ಷದ ಬಾಲಕ ಸುಶಾಂತ್ ಆಗಿದ್ದು, ಆತ ಡೆಲಿವರಿ ಕಾರ್ಯನಿರ್ವಾಹಕನಲ್ಲ ಆತ ಪಡೆದ ಪದಾರ್ಥಗಳನ್ನು ವಾಪಸ್ ನೀಡುವುದಕ್ಕೆ ಮರೆತುಬಿಡುತ್ತಾನೆ ಎಂದು ಸ್ವಿಗ್ಗಿ ಹೇಳಿದೆ. ಈ ಪ್ರಕರಣದಲ್ಲಿ ಆತ ಸ್ವಿಗ್ಗಿ ಬ್ಯಾಗ್ ನ್ನು ಪಡೆದು ಅದನ್ನು ವಾಪಸ್ ನೀಡಲು ಮರೆತಿದ್ದಾನೆ. ಆತ ಮುಂಬೈ ನ ಕುದುರೆ ಲಾಯದಲ್ಲಿ ಕೆಲಸ ಮಾಡುತ್ತಿದ್ದು, ಮದುವೆ ದಿಬ್ಬಣದ ಕಾರ್ಯಕ್ರಮಗಳಿಗೆ ಸಿಂಗರಿಸಿದ ಕುದುರೆಗಳನ್ನು ನೀಡುತ್ತಾನೆ. 

ಕುದುರೆಯ ಹೆಸರು ನೆಟ್ಟಿಗರು ಹೇಳಿದಂತೆ ತೂಫಾನ್ ಅಲ್ಲ ಬಿಜಲಿಯೂ ಅಲ್ಲ. ಅದರ ಹೆಸರು ಶಿವ ಎಂಬುದಾಗಿದ್ದು, ಆ ಬ್ಯಾಗ್ ನಲ್ಲಿ ಕುದುರೆಗೆ ಸಿಂಗರಿಸುವ ವಸ್ತುಗಳಿದ್ದವು ಎಂದು ಹೇಳಿದೆ. ಬಾಲಕ ಕುದುರೆಯ ಮೇಲೆ ಹೋಗುತ್ತಿರುವ ವೀಡಿಯೋವನ್ನು ಅವಿ ಎಂಬಾತ ಶೂಟ್ ಮಾಡಿದ್ದರು. ಆತನಿಗೆ ಈ ಹಿಂದೆ ಭರವಸೆ ನೀಡಿದ್ದಂತೆ ಸ್ವಿಗ್ಗಿ 5000 ರೂಪಾಯಿ ಬಹುಮಾನ ನೀಡಿದೆ. ಈ ಕುದುರೆಯನ್ನು ಪತ್ತೆ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಪ್ರಾಣಿಗಳಿಗೂ ನೋವುಂಟುಮಾಡಿಲ್ಲ, ನಾವು ಸಾಮಾಜಿಕ ಪ್ರಾಣಿಯೂ ಸೇರಿದಂತೆ ಎಲ್ಲಾ ಪ್ರಾಣಿಗಳ ಬಗ್ಗೆಯೂ ಕಾಳಜಿ ವಹಿಸುತ್ತೇವೆ ಎಂದು ಸ್ವಿಗ್ಗಿ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!