ದೇಶ

ಶಿಂಧೆ ಬಣ ಸೇರಿದ ಶಿವಸೇನೆ ವಕ್ತಾರೆ ಶೀತಲ್ ಮ್ಹಾತ್ರೇ: ಬಂಡಾಯ ಗುಂಪಿನೊಂದಿಗೆ ಸಂಬಂಧ ಸರಿಪಡಿಸಿಕೊಳ್ಳಲು ಉದ್ಧವ್ ಗೆ ಸಂಸದರ ಸಲಹೆ!

Srinivas Rao BV

ಮುಂಬೈ: ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರ ಬಣ ಸೇರುವ ಶಿವಸೇನೆಯ ನಾಯಕರು ಹೆಚ್ಚಾಗುತ್ತಿದ್ದು, ಶಿವಸೇನೆ ವಕ್ತಾರ ಶೀತಲ್ ಮ್ಹಾತ್ರೇ ಶಿಂಧೆ ಬಣ ಸೇರಿದ್ದಾರೆ. 

ಶೀತಲ್ ಮ್ಹಾತ್ರೇ ಮುಂಬೈ ನ ಶಿವಸೇನೆಯ ಮಾಜಿ ಕಾರ್ಪೊರೇಟರ್ ಆಗಿದ್ದು, ಸಿಎಂ ಶಿಂಧೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. 

ಉತ್ತರ ಮುಂಬೈ ನ ದಹಿಸರ್ ನಲ್ಲಿ 2012-2017 ಅವಧಿಯಲ್ಲಿ ವಾರ್ಡ್ ನಂ.7 ನ್ನು ಪ್ರತಿನಿಧಿಸುತ್ತಿದ್ದ ಶೀತಲ್, ಮಂಗಳವಾರದಂದು ಕೆಲವು ಶಿವಸೇನೆ ಕಾರ್ಯಕರ್ತರೊಂದಿಗೆ ಶಿಂಧೆ ನಿವಾಸಕ್ಕೆ ತೆರಳಿ ತಮ್ಮ ಬೆಂಬಲವನ್ನು ಶಿಂಧೆಗೆ ಘೋಷಿಸಿದ್ದರು.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಶೀತಲ್ ಅವರನ್ನು ಆಲೀಬೌಗ್ ಪೆನ್ ಏರಿಯಾಗೆ ಸಂಪರ್ಕ ಸಂಘಟಕರನ್ನಾಗಿ ನೇಮಕ ಮಾಡಿತ್ತು. ಮುಂದಿನ ಕೆಲವು ತಿಂಗಳಲ್ಲಿ ಬಿಎಂಸಿ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಶಿಂಧೆ ಬಣಕ್ಕೆ ಶಿವಸೇನೆಯ ನಾಯಕರು ಸೇರ್ಪಡೆಯಾಗುತ್ತಿರುವುದು ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: 'ಸೇವ್ ಅರೆ' ಪ್ರತಿಭಟನೆ ವೇಳೆ ಬಾಲಕಾರ್ಮಿಕರ ಬಳಕೆ: ಮಾಜಿ ಸಚಿವ ಆದಿತ್ಯ ಠಾಕ್ರೆ ಮೇಲೆ ಕಾನೂನು ಅಸ್ತ್ರ!
 
ಇದೇ ವೇಳೆ ಶಿವಸೇನೆಯ ಸಂಸದರು ಉದ್ಧವ್ ಠಾಕ್ರೆಗೆ ಸಲಹೆ ನೀಡಿದ್ದು, ಬಂಡಾಯ ಬಣದೊಂದಿಗೆ ಹಾಗೂ ಮಾಜಿ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಸಂಬಂಧ ಸರಿಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.

ಬಿಜೆಪಿಯೊಂದಿಗೆ ಮತ್ತೆ ಮೈತ್ರಿಗೆ ಒಲವು ವ್ಯಕ್ತಪಡಿಸಿರುವ ಶಿವಸೇನೆಯ ಸಂಸದರು, ಬಿಜೆಪಿ ಶಿವಸೇನೆಗೆ ಸಹಜ ಮಿತ್ರ ಪಕ್ಷವಾಗಿದ್ದು, ಎಂವಿಎ ರೀತಿ ಅಸಹಜ ಮೈತ್ರಿಯಲ್ಲ ಎಂಬ ಅಭಿಪ್ರಾಯವನ್ನು ಸಂಸದರು ವ್ಯಕ್ತಪಡಿಸಿದ್ದಾರೆ ಎಂದು ಶಿವಸೇನೆ ಸಂಸದ ಹೇಮಂತ್ ಗೋಡ್ಸೆ ಹೇಳಿದ್ದಾರೆ.

SCROLL FOR NEXT